This is the title of the web page
This is the title of the web page

Please assign a menu to the primary menu location under menu

State

ಕೆ.ಎಲ್.ಇ. ಶಿಕ್ಷಣ  ಮಹಾವಿದ್ಯಾಲಯ: ರೋವರ್ಸ – ರೇಂಜರ್ಸ್ ಘಟಕ ಉದ್ಘಾಟನೆ


ಬೆಳಗಾವಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಲಿದೆ. ಪ್ರಶಿಕ್ಷಣಾರ್ಥಿಗಳು ತಮ್ಮ ತರಬೇತಿ ಮಟ್ಟದಲ್ಲಿಯೇ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಕೌಶಲಗಳನ್ನು ಬೆಳೆಸಬೇಕಿರುವುದು ಅವಶ್ಯಕವಾಗಿದೆ ಎಂದು ಶಿವರಾಯ ಏಳುಕೋಟಿ ಹೇಳಿದರು.
ಮಂಗಳವಾರ ಅವರು ನಗರದ ಬೆಳಗಾವಿ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ರೋವರ್, ರೇಂಜರ್ಸ ಘಟಕದ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು.
ಅಂತಾರಾಷ್ಟ್ರೀಯ ಚಳುವಳಿಯಾಗಿ ಸ್ಕೌಟ್ಸ್ ತನ್ನದೆಯಾದ ಪಾರುಪತ್ಯವನ್ನು ಹೊಂದಿದ್ದು ಲಕ್ಷಾಂತರ ಸದಸ್ಯರನ್ನು ಹೊಂದಿದ್ದು ಅದರ ಗುರಿ- ಉದ್ದೇಶಗಳು ಸಾರ್ವಕಾಲಿಕವಾದವು ಎಂದರು.
ಇನ್ನೋರ್ವ ಅತಿಥಿಗಳಾದ ಪಾರ್ವತಿ ಚಿಮ್ಮಡ  ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿನ ನೀತಿ ನಿಯಮಗಳನ್ನು ಸವಿವರವಾಗಿ ಪ್ರಶಿಕ್ಷಣಾರ್ಥಿಗಳಿಗೆ ತಿಳಿಪಡಿಸಿದರು. ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳನ್ನು ಇಂತಹ ಸಂಘಟನೆಯತ್ತ ಸೆಳೆಯಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ವಿ.ಪಿ. ಕುರಿ
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಂತಹ ಜಾಗತಿಕ ಜಾಗೃತಿ ಸಂಘಟನೆಗಳು ಸಾಮಾಜಿಕ ಜವಾಬ್ದಾರಿಗಳನ್ನು ಹೆಚ್ಚಿಸಿ ತಮ್ಮನ್ನು ತಾವು ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ ಈ  ನಿಟ್ಟಿನಲ್ಲಿ ಶಿಕ್ಷಣಾರ್ಥಿಗಳು ಉತ್ತಮ ಕಾರ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದರು. ಉಪನ್ಯಾಸಕರಾದ ,  ಡಿ.ಕೆ.ಕುಲಕರ್ಣಿ, ಸುಜಾತಾ ಪೈ,  ಎಸ್.ಕೆ. ತಳವಾರ, ಸಿದ್ದಪ್ಪ ಪಿ, ಗಿರಿಜಾ ಕಾಡಣ್ಣವರ, ಭುವನೇಶ್ವರಿ ಪಾಟೀಲ,
ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಭುವನೇಶ್ವರಿ, ಸೋನಂ ತೋಡಕರ ಮುಂತಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ರೇಂಜರ್ಸ ಮುಖ್ಯಸ್ಥೆ ಅನಿತಾ ದೊಡಮನಿ ಸ್ವಾಗತಿಸಿದರು. ರೋವರ್ಸ ಮುಖ್ಯಸ್ಥರಾದ
ಜಗನ್ನಾಥ ಗೋಲಿಹಳ್ಳಿ ಪ್ರಾರ್ಥಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಣೀತಾ ಮಿರಜಕರ ನಿರೂಪಿಸಿದರು. ಬಸಮ್ಮ ವಂದಿಸಿದರು.

Leave a Reply