ಬೆಳಗಾವಿ : ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಹಯೋಗದೊಂದಿಗೆ ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಕರ‍್ಯಕ್ರಮವನ್ನು ಇದೇ ದಿ. ೫ ರವಿವಾರದಂದು ಸಾಯಂಕಾಲ ೪-೩೦ ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಕೃ.ಪು. ಪ್ರತಿಷ್ಠಾನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿಯವರು ವಹಿಸಿಕೊಳ್ಳುತ್ತಾರೆ. ಹಿರಿಯ ಕವಿಗಳಾದ ಪ್ರೊ. ಎಂ. ಎಸ್. ಇಂಚಲ ಉದ್ಘಾಟಿಸಲಿದ್ದು ಕವಿ, ವಿಮರ್ಶಕ ಡಾ. ವೈ. ಎಂ. ಯಾಕೊಳ್ಳಿ “ಪುರಾಣಿಕ ಪ್ರಪಂಚ” ಕೃತಿ ಬಿಡುಗಡೆ ಮಾಡಲಿದ್ದಾರೆಂದು ಪ್ರತಿಷ್ಠಾನದ ಕಾರ್ಯದರ್ಶಿ ಆನಂದ ಪುರಾಣಿಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ದಿ. ೫ ರಂದು ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ ಉದ್ಘಾಟನೆ