This is the title of the web page
This is the title of the web page

Please assign a menu to the primary menu location under menu

Local News

ಲಕ್ಷ್ಮೀ ಹೆಬ್ಬಾಳಕರ್ ಚುನಾವಣೆ ಕಾರ್ಯಾಲಯ ಉದ್ಘಾಟನೆ


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ಗೋಕುಲ್ ನಗರದಲ್ಲಿ  ಕಾಂಗ್ರೆಸ್ ಪಕ್ಷದ ಚುನಾವಣೆ ಕಾರ್ಯಾಲಯವನ್ನು  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಉದ್ಘಾಟಿಸಿದರು.
ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕಾರ್ಯಾಲಯ ಆರಂಭಿಸಲಾಗಿದೆ. ಸಾರ್ವಜನಿಕರೂ ಸಹ ಇದರ ಸದುಪಯೋಗಪಡೆಯಬಹುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. 
ಕ್ಷೇತ್ರದೆಲ್ಲೆಡೆ ಕಾಂಗ್ರೆಸ್ ಪರ ಅಭೂತಪೂರ್ವ ಒಲವಿದ್ದು, ಕಾಂಗ್ರೆಸ್ ಸರಕಾರದ ಸಾಧನೆ, ಜನೋಪಯೋಗಿ ಕೆಲಸ ಮತ್ತು ಬಿಜೆಪಿ ಸರಕಾರದ ವೈಫಲ್ಯ, ಬೆಲೆ ಏರಿಕೆ, ಭ್ರಷ್ಟಾಚಾರಗಳ ಕುರಿತು ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದೂ ಅವರು ಕೋರಿದರು.
 ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ದೇಸಾಯಿ, ಪಿಂಟು ಮಲ್ಲವ್ವಗೋಳ, ಗಜಾನನ ಕಣಬರ್ಕರ್, ಶ್ಯಾಮ್ ಮುತಗೇಕರ್, ದೀಲಿಪ್ ಬಸರೀಕಟ್ಟಿ, ಮಹೇಶ ಸುಗನನ್ನವರ್, ರುದ್ರಪ್ಪ ಅಮ್ರಾಪುರ, ಪ್ರಕಾಶ ಕಡ್ಯಾಗೋಳ, ರಾಧಿಕಾ ಮುತಗೇಕರ್, ಫಕೀರವ್ವ ಅಮ್ರಾಪುರ, ಲಕ್ಷ್ಮೀ ಪಾಟೀಲ,ಮಂಜುಳಾ ಅಗಸಿಮನಿ, ಶೀಲಾ ಸೈಬಣ್ಣವರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply