This is the title of the web page
This is the title of the web page

Please assign a menu to the primary menu location under menu

Local News

ಸಂಚಾರಿ ಪಶು ಚಿಕತ್ಸಾ ಘಟಕ ಹಾಗೂ ಇಲಾಖೆಯ ವಿವಿಧ ಕಟ್ಟಡಗಳ ಉದ್ಘಾಟನೆ: ಜುಲೈ ೧೯ ರಂದು


ಬೆಳಗಾವಿ ಜುಲೈ ೧೪:-ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ರಾಷ್ಟ್ರೀಯ ಜಾನವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಂಚಾರಿ ಪಶು ಚಿಕತ್ಸಾ ಘಟಕಗಳ ಲೋಕರ್ಪಣೆ ಹಾಗೂ ಇಲಾಖೆಯ ವಿವಿಧ ಕಟ್ಟಡಗಳ ಕಾರ್ಯಕ್ರಮ ಜುಲೈ ೧೯ ರಂದು ಬೆಳಿಗ್ಗೆ ೧೧ ಘಂಟೆಗೆ ಸುವರ್ಣ ವಿಧಾನಸೌಧದ ಸಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ.
. ಜಿಲ್ಲಾ ಉಸ್ತಾವರಿ ಜಲಪಂನ್ಮೂಲ ಸಚಿವರಾದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸುವರು. ಅರಣ್ಯ ಹಾಗೂ ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು, ಹಾಗೂ ಮುಜರಾಯಿ, ಹಜ್ ಹಾಗೂ ವಕ್ಫ ಸಚಿವರ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ .
ಈ ಕಾರ್ಯಕ್ರಮದ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆಯನ್ನು ಪಶು ಸಂಗೋಪನಾ ಸಚಿವರು ಪ್ರಭು ಬಿ.ಚವ್ಹಾಣ ಮಾಡಲಿದ್ದಾರೆ.
.ಬೆಳಗಾವಿ ಗ್ರಾಮೀಣ ಶಾಸಕರಾದ ಲಕ್ಷ್ಮೀ ಆರ್ ಹೆಬ್ಬಾಳಕರ ಅಧ್ಯಕ್ಷತೆ ವಹಿಸಿಲಿದ್ದಾರೆ. ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ, ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ, ಪೋಲಿಸ್ ಆಯುಕ್ತರಾದ ಎಂ.ಬಿ.ಬೋರಲಿಂಗಯ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್.ವಿ ಭಾವಹಿಸಲಿದ್ದಾರೆ. ಎಂದು ಧಾರವಾಡ ಜಿಂಟಿ ನಿರ್ದೇಶಕರು ಪಶು ಪಾಲನಾ ಮತ್ತು ಬೆಳಗಾವಿ ಪಶು ವೈದ್ಯಕೀಯ ಸೇವಾ ಇಲಾಖೆ ಬಿ.ಎಲ್.ಪರಮೇಶ್ವರ ನಾಯ್ಕ ಮತ್ತು ಉಪನಿರ್ದೇಶಕ ಪಶು ಪಾಲನಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply