World

ಚುಟುಕು ಸಾಹಿತ್ಯ ಪರಿಷತ್ತಿನ  ಮೂಡಲಗಿ ತಾಲೂಕಾ  ಘಟಕ ಉದ್ಘಾಟನೆ 

WhatsApp Group Join Now
Telegram Group Join Now

ಬೆಳಗಾವಿ; ಚುಟುಕು ಸಾಹಿತ್ಯ ಪರಿಷತ್ತಿನ  ಮೂಡಲಗಿ ತಾಲೂಕಾ ನೂತನ ಘಟಕದ ಉದ್ಘಾಟನಾ ಸಮಾರಂಭ ನಿನ್ನೆ ಬಹಳ ವಿಜೃಂಭಣೆಯಿಂದ ನೆರವೇರಿತು.
ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎಸ್. ಆರ್. ಸೋನವಾಲ್ಕರ್ ನಾಡದೇವಿಗೆ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಚುಸಾಪ ಅಧ್ಯಕ್ಷರಾದ ಶ್ರೀ ಎಲ್. ಎಸ್‌. ಶಾಸ್ತ್ರಿ ಅವರು ಕನ್ನಡ ಧ್ವಜವನ್ನು ಮೂಡಲಗಿ ತಾಲೂಕಾ ಅಧ್ಯಕ್ಷರಾದ ಶ್ರೀ ಚಿದಾನಂದ ಹೂಗಾರ ಅವರಿಗೆ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಮುಂದಿನ ಮೂರು ವರುಷಗಳ ಅವಧಿಯ ಹೊಸ ಸಮಿತಿಗೆ ಶುಭ ಕೋರಿದರು.
ಜಿಲ್ಲಾ ಚುಸಾಪ ಕಾರ್ಯಾಧ್ಯಕ್ಷ ಡಾ. ಸಿ. ಕೆ. ಜೋರಾಪುರ, ಪ್ರ. ಕಾರ್ಯದರ್ಶಿ ಬಸವರಾಜ ಗಾರ್ಗಿ, ಶ್ರೀ ಆನಂದ ಪುರಾಣಿಕ, ಪ್ರಾ. ಸಂಗಮೇಶ ಗುಜಗೊಂಡ, ಕಸಾಪ ಗೋಕಾಕ ತಾಲೂಕಾ ಅಧ್ಯಕ್ಷ ಸಂಜಯ ಶಿಂದಿಹಟ್ಟಿ, ಕ್ಷೇತ್ರ  ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ , ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ ದ್ಯಾಗಾನಟ್ಟಿ, ಗೋಕಾಕ ಚುಸಾಪ ಅಧ್ಯಕ್ಷ ಜಯಾನಂದ ಮಾದರ, ಹಿರಿಯ ಸಾಹಿತಿ ಪ್ರೊ. ಶಿವಾನಂದ ಬೆಳಕೂಡ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮಾ ಯಲಿಗಾರ ಅವರ ” ನಿರ್ಮಲ ಕಾವ್ಯ” ಕವನ ಸಂಕಲನವನ್ನು ಎಲ್. ಎಸ್. ಶಾಸ್ತ್ರಿ ಬಿಡುಗಡೆ ಮಾಡಿದರು.
WhatsApp Group Join Now
Telegram Group Join Now

Related Posts