This is the title of the web page
This is the title of the web page

Please assign a menu to the primary menu location under menu

Local News

ಜ.೧೮.ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆ


ಮೂಡಲಗಿ: ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಕೆ.ಎಚ್.ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಜ.೧೮ ರಂದು ಮುಂಜಾನೆ ೧೦-೩೦ಕ್ಕೆ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಅರವಿಂದ ದಳವಾಯಿಯವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆ ಜರುಗಲಿದೆ.
ಈ ಕಾರ್ಯಕ್ರಮದ ಹಂದಿಗುಂದದ ಶ್ರೀಮಂತ ಶಿವಯೋಗಿಸಿದ್ದರು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ ನಾವಲಗಟ್ಟಿ, ಸುರೇಶ ಲಾತೂರ, ಟಿ. ಈಶ್ವರ, ರಾಜದೀಪ ವೀರಣ್ಣ ಕೌಜಲಗಿ, ಜಹೂರ್ ಆರ್. ಹಾಜಿ, ಅನಂತಕುಮಾರ ಬ್ಯಾಕೂಡ, ಅಶೋಕ ಪೂಜೇರಿ, ಪ್ರಕಾಶ ಅರಳಿ ಮುಂತಾದವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನೂತನ ಪದಾದಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಗುವದು. ಈ ಕಾರ್ಯಕ್ರಮಕ್ಕೆ ಅರಭಾವಿ ಮತಕ್ಷೇತ್ರದ ಎಲ್ಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸೂರ್ಯಕಾಂತ ಮಗದುಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply