This is the title of the web page
This is the title of the web page

Please assign a menu to the primary menu location under menu

State

ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ


ಕುಷ್ಟಗಿ:- ತಾಲೂಕಿನದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ನಡೆದ ದೋಟಿಹಾಳ ವ ಕೇಸೂರ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮೀಣರ ಜ್ಞಾನ ಪರಂಪರೆ ಎಂಬ ವಿಷಯದ ಕುರಿತು ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಅವರು ಉಪನ್ಯಾಸವನ್ನು ನೀಡಿದರು.

ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಶರಣೆಗೌಡ ಪೋಲಿಸಪಾಟೀಲ, ಕುಷ್ಟಗಿ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ, ಕೇಂದ್ರ ಕಸಾಪ ಸಂಸಂಪ್ರತಿನಿಧಿ ನಬಿಸಾಬ ಕುಷ್ಟಗಿ, ಲಾಡ್ಲೇಮಷಾಕ ದೋಟಿಹಾಳ, ಹನಮಂತರಾವ ದೇಸಾಯಿ, ಗ್ಯಾನಪ್ಪ ಮೇಟಿ ಇತರರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಚಂದ್ರಶೇಖರ ದೇವರು, ದೋಟಿಹಾಳ ಗ್ರಾಪಂ ಅಧ್ಯಕ್ಷರಾದ ಲಕ್ಷö್ಮವ್ವ ಕುಷ್ಟಗಿ, ಕೇಸೂರ ಗ್ರಾಪಂ ಅಧ್ಯಕ್ಷರಾದ ಶೇಖಪ್ಪ ಪೂಜಾರ, ಅವಳಿ ಗ್ರಾಪಂ ಸದಸ್ಯರು, ತಾಲೂಕು ಕಸಾಪ ಸದಸ್ಯ ಪರಶಿವಮೂರ್ತಿ ಮಾಟಲದಿನ್ನಿ, ಹೋಬಳಿ ಕಸಾಪ ಅಧ್ಯಕ್ಷ ರಹಿಮಾನಸಾಬ ಮಾರನಬಸರಿ, ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ, ಬಸವರಾಜ ಶೆಟ್ಟರ, ಬಾಳಪ್ಪ ಅರಳಿಕಟ್ಟಿ, ಶೇಖಪ್ಪ ದೊಡ್ಡಮನಿ, ಪರಸಪ್ಪ ಹೊಸಳ್ಳಿ, ಕೆವೈ ಕಂದಕೂರು, ಸಿದ್ರಾಮಪ್ಪ ಅಮರಾವತಿ, ಭಾರತಿ ಭಟ್, ನಾಗರಾಜ ಶೆಟ್ಟರ ಹಾಗೂ ಉಮಾಪತಿ ಮಾಳಗಿ ನಿರೂಪಿಸಿದರು. ಸೇರಿದಂತೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಇತರರು ಹಾಜರಿದ್ದರು.


Gadi Kannadiga

Leave a Reply