ಕೊಪ್ಪಳ ಜನವರಿ ೦೭ : ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೩ರ ಅಂಗವಾಗಿ ಎಸ್.ಜಿ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ಮಾಧ್ಯಮ ಕೇಂದ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಜನವರಿ ೦೭ ರಂದು ಉದ್ಘಾಟಿಸಿದರು.
ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರಿಗೆ ಸುದ್ದಿ ಬಿಡುಗಡೆ ಹಾಗೂ ನೇರಪ್ರಸಾರಕ್ಕೆ ಅನುಕೂಲವಾಗಲು ಶ್ರೀ ಗವಿಮಠದಿಂದ ಮೀಡಿಯಾ ಸೆಂಟರ್ ಪ್ರಾರಂಭಿಸಲಾಗಿದ್ದು, ಶನಿವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗವಿಮಠದ ವ್ಯವಸ್ಥಾಪನಾ ಸಮಿತಿಯವರು, ಪತ್ರಕರ್ತರು, ವಾರ್ತಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಆಕರ್ಷಣೀಯ ರಂಗೋಲಿ: ಗವಿಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಜನವರಿ ೦೭ ರಂದು ರಂಗೋಲಿ ಸ್ಪರ್ಧೆ ನಡೆಯಿತು. ರಥದ ಮುಂದೆ ಮೂಡಿ ಬಂದ ರಂಗೋಲಿ ಚಿತ್ರಗಳು ಆಕರ್ಷಣೀಯವಾಗಿದ್ದು, ನೋಡುಗರ ಗಮನ ಸೆಳೆಯುತ್ತಿವೆ.
Gadi Kannadiga > State > ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ : ಮಾಧ್ಯಮ ಕೇಂದ್ರ ಉದ್ಘಾಟನೆ