ಬೆಳಗಾವಿ ಡಿಸೆಂಬರ್ ೧೬:ಬೆಳಗಾವಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ ಖಾಸಬಾಗ ವತಿಯಿಂದ ಮಹಿಳಾ ಜ್ಞಾನ ವಿಕಾಸ ಯೋಜನೆಯಡಿ ತಾಲೂಕಿನ ಮಾಸ್ತಮರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಟ್ಯೂಶನ್ ಕ್ಲಾಸ್ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ನಮ್ಮ ಧರ್ಮಸ್ಥಳ ಸಂಘವು ಶಿಕ್ಷಣಕ್ಕೆ ಹೆಚ್ವಿನ ಆಧ್ಯತೆ ಕೊಡುತ್ತಿದ್ದು, ಅದರ ಭಾಗವಾಗಿ ಈಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಟ್ಯೂಶನ್ ಕ್ಲಾಸ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯೆ ಬಿ.ಎಸ್.ಕೊಟ್ಟೂರಶೆಟ್ಟಿ, ತಾಲೂಕಾ ಯೋಜನಾಧಿಕಾರಿ ಮಂಜುನಾಥ ಎನ್.ಆರ್. ಶೋಭಾ ಶೀಲವಂತ, ಪ್ರತಿಭಾ ಹೊಳೆಪ್ಪಗೌಡ, ಮಲ್ಲಿಕಾರ್ಜುನ ಬಳೊಬಾಳ, ಎಸ್.ವ್ಹಿ. ಕಲಾದಗಿ, ಮೇಲ್ವಿಚಾರಕ ಪರಮೇಶ್ವರ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗೂಬಾಯಿ ಜಗತಾಪ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಭಾರತಿ ಕುಂದರಗಿ ವಂದಿಸಿದರು. ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಯರಝರ್ವಿ, ಉಪಾಧ್ಯಕ್ಷೆ ಲಕ್ಷ್ಮೀ ತಾರೆಕರ, ನಾಗರತ್ನ ಬಡಿಗೇರ, ಗಂಗವ್ವ ಕೋಲಕಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು.
Gadi Kannadiga > Local News > ವಿದ್ಯಾರ್ಥಿಗಳ ಟ್ಯೂಶನ್ ಕ್ಲಾಸ್ ಉದ್ಘಾಟನೆ