ಕುಷ್ಟಗಿ:- ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಡಾ:ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಬಹುದಿನಗಳ ಬೇಡಿಕೆಯಾಗಿದ್ದ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆಯಾಗಿದೆ..
ಉದ್ಘಾಟನೆಯನ್ನು ಕುಷ್ಟಗಿ ತಾಲೂಕ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯರಾದ ಕೆ ಎಸ್ ರೆಡ್ಡಿ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ಪ್ರತಿಯೊಂದು ರಂಗದಲ್ಲಿ ನಾವು ಬೆಳೆಯಬೇಕಾದರೆ ನಾವು ಪುಸ್ತಕಗಳನ್ನು ಓದಬೇಕು ಪುಸ್ತಕಗಳು ಓದಬೇಕೆಂದರೆ ಗ್ರಂಥಾಲಯ ಬೇಕು ಎಂದರು.ಗ್ರಂಥಾಲಯವೆಂದರೆ ದೇವಸ್ಥಾನ ವಿದ್ದಂತೆ,ಅದು ಈಗ ಗ್ರಾಮದಲ್ಲಿ ಆಗಿರುವುದು ಬಹಳ ಸಂತೋಷಕರ ವಿಚಾರ ಎಂದರು.ಗ್ರಾಮದ ಯುವಕರು ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡಿಸಿಕೊಂಡು ಹಲವು ವಿಷಯಗಳನ್ನೊಳಗೊಂಡ ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಎಂದರು. ಇದೇ ಸಂದರ್ಭದಲ್ಲಿ ಡಾಕ್ಟರ್ ಕೆಎಸ್ ರೆಡ್ಡಿರವರು ಹಲವಾರು ಪುಸ್ತಕಗಳನ್ನು ದೇಣಿಗೆಯಾಗಿ ಗ್ರಂಥಾಲಯಕ್ಕೆ ನೀಡಿದರು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಪಿಡಿಓ ಅಂಬುಜಾ ಎಸ್ ಪಾಟೀಲ್ ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮದ ಗ್ರಾಮದವರಾದ ಬಸ್ಸಪ್ಪ ಕುಷ್ಟಗಿ ವೀರಭದ್ರಯ್ಯ ಬೆನಕನಾಳ,ಕರಬಸಯ್ಯ, ದುರಗಪ್ಪ ಮೇಣೆದಾಳ,ಶಂಕ್ರಪ್ಪ ಗರ್ಜನಾಳ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅಂಬುಜಾ ಎಸ್ ಪಾಟೀಲ್,ಸಿಬ್ಬಂದಿಯವರಾದ ವಿರುಪಾಕ್ಷಪ್ಪ ಜರಗಡ್ಡಿ ಹಾಗೂ ಗ್ರಾಮದ ಯುವಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ಗಣ್ಯ ರಿಗೆ ಗ್ರಾಮಸ್ಥರ ಹಾಗೂ ಯುವಕರ ಪರವಾಗಿ ಸನ್ಮಾನಿಸಲಾಯಿತು.
ಇದರ ಜೊತೆಗೆ ಗ್ರಾಮದಲ್ಲಿ ನೂತನವಾಗಿ ಡಾ.ಪುನೀತ್ ರಾಜಕುಮಾರ ಎಂಬ ಹೆಸರಿನಲ್ಲಿ ಸರ್ಕಲ್ ಉದ್ಘಾಟಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ