ಬೆಳಗಾವಿ, ಮಾ.೨೮: ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪದ್ಧತಿಯಡಿಯಲ್ಲಿ ೨೦೨೨-೨೩ ರ ಆರ್ಥಿಕ ವರ್ಷದ ಆಸ್ತಿ ತರಿಗೆ ಲೆಕ್ಕಾಚಾರದಂತೆ ಮೂಲ ಆಸ್ತಿ ತೆರಿಗೆಯ ಮೊತ್ತಕ್ಕೆ ೨೦೨೩-೨೪ ನೇ ಆರ್ಥಿಕ ಸಾಲಿಗೆ ಅನ್ವಯಿಸುವಂತೆ ಶೇಕಡಾವಾರು ಮೊತ್ತವನ್ನು ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿರುತ್ತದೆ.
ವಸತಿ ಬಳಕೆಯ ಆಸ್ತಿಗಳಿಗೆ ಶೇ.೩, ವಾಣಿಜ್ಯ ಬಳಕೆಯ ಆಸ್ತಿಗಳಿಗೆ ಶೇ.೩, ಕೈಗಾರಿಕೆ ಬಳಕೆಯ ಆಸ್ತಿಗಳಿಗೆ ಶೇ.೩, ಖಾಲಿ ಜಾಗೆ ಬಳಕೆಯ ಆಸ್ತಿಗಳಿಗೆ ಶೇ.೩ ರಷ್ಟು ಹೆಚ್ಚಳವಾಗಿರುತ್ತದೆ.
ಕಾರಣ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು/ಅನುಭೋಗದಾರರು ಸಕಾಲದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿ ಪುರಸಭೆಯ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದು ಉಗಾರ ಖುರ್ದ ಪುರಸಭೆ ಮುಖ್ಯಾಧಿಕಾರಿಯಾದ ಸುನೀಲ ಎಮ್. ಬಬಲಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮೂಲ ಆಸ್ತಿ ತೆರಿಗೆಯ ಮೊತ್ತದಲ್ಲಿ ಹೆಚ್ಚಳ
ಮೂಲ ಆಸ್ತಿ ತೆರಿಗೆಯ ಮೊತ್ತದಲ್ಲಿ ಹೆಚ್ಚಳ
Suresh28/03/2023
posted on