This is the title of the web page
This is the title of the web page

Please assign a menu to the primary menu location under menu

State

ಝರಾಕ್ಸ್ ಪ್ರತಿಗೆ ೩ ರೂ.ಗೆ ಹೆಚ್ಚಳ : ಯುನಿಯನ್ ವತಿಯಿಂದ ತೀರ್ಮಾನ


ಕುಷ್ಟಗಿ: ಈಗಾಗಲೇ ದಿನಬಳಕೆ‌ವಸ್ತುಗಳು ಗಗನಕ್ಕೇರಿದ್ದು ಬೆಲೆ ಏರಿಕೆ ಬಿಸಿ ಝರಾಕ್ಸ್ ಕ್ಷೇತ್ರಕ್ಕೂ ತಟ್ಟಿದ್ದು ಒಂದು ಪ್ರತಿಗೆ ೩.೦೦ ರಂತೆ ಬೆಲೆ ನಿಗದಿ ಮಾಡಿ ಕುಷ್ಟಗಿ ಝರಾಕ್ಸ್ ಸೆಂಟರ್ ಯುನಿಯನ್ ನಿರ್ಧಾರ ಮಾಡಿ ಪಟ್ಟಣದ ಪ್ರತಿಯೊಬ್ಬರೂ ಇದನ್ನು ಪಾಲನೆ ಮಾಡಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಲ್ಲಿನ ಝರಾಕ್ಸ್ ಯುನಿಯನ್ ಝರಾಕ್ಸ್ ಪ್ರತಿಗೆ ೨ ರೂ ನಿಂದ ೩ ರೂ.ಗೆ ಏರಿಕೆ ಮಾಡುವ ಉದ್ದೇಶದಿಂದ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಾಜರಿದ್ದ ಹಿರಿಯರಾದ ರವೀಂದ್ರ ಬಾಕಳೆ ಮಾತನಾಡಿ ಈಗಾಗಲೇ ತಹಶೀಲ ಕಛೇರಿಯ ಹತ್ತಿರದ ಅಂಗಡಿಕಾರರು ಒಂದು ಪ್ರತಿಗೆ ೩ ರೂ. ನಂತೆ ಬೆಲೆ ನಿಗದಿಮಾಡಿ ಗ್ರಾಹಕರಿಂದ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇದು ಕೇವಲ ಅಲ್ಲಿ ಮಾತ್ರ ಸೀಮಿತವಾಗಿದೆ. ಇನ್ನುಳಿದ ಮಾರ್ಕೆಟ್‌ ನಲ್ಲಿ ಜಾರಿಗೆ ಇಲ್ಲ. ಈಗ ಕಾಗದ ಬಂಡಲ್, ಕರೆಂಟ್ ಬಿಲ್, ಝರಾಕ್ಸ್ ಮಷಿನ್ ಬಿಡಿ ಭಾಗಗಳು, ರಿಪೇರಿ ಸೆರಿದಂತೆ ಅನೇಕ ಖರ್ಚು ವೆಚ್ಚಗಳು ಗಗನಕ್ಕೇರಿವೆ. ಅದನ್ನು ಕೇವಲ ೨ ರೂ. ನಲ್ಲಿ ನಿಭಾಯಿಸಲು ಕಷ್ಟಸಾಧ್ಯ. ಬಡ ಕುಟುಂಬದ ನಿರ್ವಹಣೆಗೆ ಕೂಡ ಇದು ಅಸಾಧ್ಯ. ಇದನ್ನೆ ನಂಬಿ ಬದುಕು ಕಟ್ಟಿಕೊಳ್ಳಬೇಕಾದರೆ ಹೆಣಗಾಡಬೇಕಾಗಿದೆ.

ಅಲ್ಲದೇ ಈಗಾಗಲೇ ಬೇರೆ ಬೇರೆ ನಗರಗಳಲ್ಲಿಯೂ ಸಹ ಪ್ರತಿ ಪುಟಕ್ಕೆ ೩-೦೦ ರುಪಾಯಿಯಂತೆ ಜಾರಿಗೊಳಿಸಲಾಗಿದೆ. ಹೀಗಾಗಿ ಅನಿವಾರ್ಯವಾಗಿ ನಾವು ಪ್ರತಿ ಒಂದು ಪ್ರತಿಗೆ ೩-೦೦ ಮತ್ತು ಎರಡು ಬದಿಯ ಪ್ರತಿಗೆ ೫-೦೦ ರೂಪಾಯಿಯಂತೆ ಪ್ರತಿಯೊಬ್ಬ ಝರಾಕ್ಸ್ ಅಂಗಡಿಕಾರರು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿ ಹೊಸ ದರವನ್ನು ಜಾರಿಗೊಳಿಸುವಂತೆ ಕರೆ ನೀಡಿದರು. ಇದಕ್ಕೆ ಗ್ರಾಹಕರು ಕೂಡ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ತಪ್ಪಿ ನಡೆದವರ ಅಂಗಡಿಯ ಮುಂದೆ ಯುನಿಯನ್ ವತಿಯಿಂದ ಒತ್ತಾಯಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮನ್ಸೂರ, ಮಲ್ಲಪ್ಪ ಕಂಚಿ, ವಿಶ್ವನಾಥ ಸೊಪ್ಪಿಮಠ, ಅನೀಲ ಕಮ್ಮಾರ, ವೈಜನಾಥ ಹೂಗಾರ, ಪ್ರಸನ್ನ ಹಿರೇಮಠ ಸೇರಿದಂತೆ ಸುಮಾರು ೩೦ ಕ್ಕೂ ಹಾಗು ಹೆಚ್ಚು ಅಂಗಡಿಕಾರರು ಉಪಸ್ಥಿತರಿದ್ದರು.


Gadi Kannadiga

Leave a Reply