This is the title of the web page
This is the title of the web page

Please assign a menu to the primary menu location under menu

Local News

ಹೆಚ್ಚಿದ ಅಗ್ನಿಪಥ್ ಕಾವು ಬೆಳಗಾವಿಯಲ್ಲಿ ಪೊಲೀಸ್ ಪಥಸಂಚಲನ


ಬೆಳಗಾವಿ: ಅಗ್ನಿಪಥ್ ಕಾವು ಬೆಳಗಾವಿಗೂ ಚಾಚಿದ್ದು ಖಾಕಿ ಪಡೆಯ ತಲೆಬಿಸಿ ಮಾಡಿದೆ. ಯೋಜನೆ ವಿರೋಧಿಸಿ ಇಂದು ಬೆಳಗಾವಿ ಬಂದಗೆ ಕರೆ ನೀಡಲಾಗಿದ್ದು ಪ್ರತಿಭಟನೆಯ ಬಿಸಿ ಬೆಳಗಾವಿ ನಗರದ ಜನತೆಗೆ ತಟ್ಟುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ನಗರದ ಬೀದಿಗಳಲ್ಲಿ ಪಥಸಂಚಲನ ನಡೆಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ನಗರದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಎರಡು ಮೂರು ದಿನಗಳಿಂದ ಸರದಿ ಸಾಲಿನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಬೆಳಗಾವಿ ಚಲೋ ಮಹಾ ಆಂದೋಲನದ ಮೂಲಕ ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಲಿದ್ದಾರೆ. ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಹೈಅಲರ್ಟ್ ಘೋಷಿಸಿದ್ದು, ನಗರದ ಬೀದಿ ಬೀದಿಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಪಡೆ ತಂಡ ಚೆನ್ನಮ್ಮ ವೃತ್ತದಿಂದ ಪಥಸಂಚಲನ ನಡೆಸಿದೆ.


Gadi Kannadiga

Leave a Reply