This is the title of the web page
This is the title of the web page

Please assign a menu to the primary menu location under menu

Local News

ಅಂಬೇಡ್ಕರ ಸರ್ಕಲ್ ಘೋಷಣೆಗೆ ಮುಖ್ಯಾಧಿಕಾರಿ ತಾರತಮ್ಯ ಹುಕ್ಕೇರಿಯಲ್ಲಿ ದಲಿತ ಕಾರ್ಯಕರ್ತರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭ


ಹುಕ್ಕೇರಿ : ಪಟ್ಟಣದ ಅಡವಿಸಿದ್ದೇಶ್ವರ ಮಠದ ಬಳಿ ಅಧಿಕೃತವಾಗಿ ಅಂಬೇಡ್ಕರ ವೃತ್ತ ಎಂದು ಘೋಷಿಸಲು ಮುಖ್ಯಾಧಿಕಾರಿ ತಾರತಮ್ಮ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ ಯುವಕ ಮಂಡಳ ಕಾರ್ಯಕರ್ತರು ಶುಕ್ರವಾರದಿಂದ ಪುರಸಭೆ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಅಡವಿಸಿದ್ದೇಶ್ವರ ಮಠದ ಬಳಿ ಇರುವ ವೃತ್ತವನ್ನು ಈಗಾಗಲೇ ಅಂಬೇಡ್ಕರ ಸರ್ಕಲ್ ಎಂದು ಕರೆಯುತ್ತಿದ್ದರೂ ಪುರಸಭೆಯಲ್ಲಿ ಅಧಿಕೃತವಾಗಿ ದಾಖಲಾಗಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಬಹುದಿನಗಳ ಬೇಡಿಕೆಯಾಗಿರುವ ಈ ವೃತ್ತಕ್ಕೆ ಅಂಬೇಡ್ಕರ ಸರ್ಕಲ್ ಎಂದು ಘೋಷಿಸಲು ಮುಖ್ಯಾಧಿಕಾರಿ ಮೋಹನ ಜಾಧವ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ದಲಿತ, ಇಬ್ಬಗೆಯ ನೀತಿ ಅನುಸರಿಸಿ ಅಪರೋಕ್ಷವಾಗಿ ಅಸ್ಪೃಶ್ಯತೆ ಆಚರಿಸುತ್ತಿದ್ದು ಜಾತಿವಾದಿ ಮನಸ್ಥಿತಿ ತೋರುತ್ತಿದ್ದಾರೆ. ಕೂಡಲೇ ಮುಖ್ಯಾಧಿಕಾರಿ ಜಾಧವ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪಟ್ಟಣದ ಕೆಲವು ಕಡೆಗಳಲ್ಲಿ ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೇ ವೃತ್ತಗಳನ್ನು ರಚಿಸಲಾಗಿದೆ. ಆದರೆ, ಅಂಬೇಡ್ಕರ ಸರ್ಕಲ್ ವಿಷಯದಲ್ಲಿ ಮಾತ್ರ ಪುರಸಭೆಯವರು ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ. ಅಧಿಕೃತವಾಗಿ ಅಂಬೇಡ್ಕರ ಸರ್ಕಲ್ ಘೋಷಿಸಿ ಪುರಸಭೆಯಲ್ಲಿ ಠರಾವು ಪಾಸ್ ಮಾಡುವಂತೆ ಎಸ್ಸಿಎಸ್ಟಿ ಸದಸ್ಯರು ಲಿಖಿತವಾಗಿ ಮನವಿ ಮಾಡಿದರೂ ಮುಖ್ಯಾಧಿಕಾರಿ ಜಾಧವ ಕ್ಯಾರೆ ಎನ್ನುತ್ತಿಲ್ಲ. ಅಧಿಕೃತ ಅಂಬೇಡ್ಕರ ಸರ್ಕಲ್ ಘೋಷಿಸುವವರೆಗೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪುರಸಭೆ ಸದಸ್ಯರಾದ ಸದಾಶಿವ ಕರೆಪ್ಪಗೋಳ, ಚಂದು ಮುತ್ನಾಳೆ, ಮಧು ಕರನಿಂಗ್, ಮುಖಂಡರಾದ ವಿನಯ ಹಾದಿಮನಿ, ಸತ್ಯಜಿತ್ ದೇವರುಷಿ, ಸೋನು ಕಾಂಬಳೆ, ಶಾಂತಾ ಯರಗಟ್ಟಿ, ಗುರುರಾಜ್ ವಂದಾಳೆ, ವಿಲ್ಸನ್ ಕೌಜಲಗಿ, ಅರುಣ ಬೆಳವಿ, ಎನ್.ಟಿ.ಸಚೀನ್, ಮಲ್ಲೇಶ ಕುರಣಿ ಮತ್ತಿತರರು ಉಪಸ್ಥಿತರಿದ್ದರು.


Gadi Kannadiga

Leave a Reply