ಬೆಳಗಾವಿ, ಜು.೦೩: ನೀರಿನ ಮಿತ ಬಳಕೆ ಹಾಗೂ ಜಲಮೂಲಗಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತಿ ಸದ್ಯಸರು ಹಾಗೂ ಗ್ರಾಮ ಕುಡಿಯುವ ನೀರು ನೈರ್ಮಲ್ಯ ಸಮಿತಿ ಪಾತ್ರ ಪ್ರಮುಖವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಶಶಿಕಾಂತ ನಾಯಕ ಅಭಿಪ್ರಾಯ ಪಟ್ಟರು.
ಜುಲೈ.೦೧ ೨೦೨೩ ರಂದು ಬೆಳಗಾವಿಯ ಜಿಲ್ಲಾ ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಇವರು ಸವದತ್ತಿ, ಕಿತ್ತೂರ, ಖಾನಾಪೂರ ತಾಲೂಕು ಆಯ್ದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಬೆಳಗಾವಿ ತಾಲೂಕು ಹಂದಿಗನೂರು ಬಹುಗ್ರಾಮ ಕುಡಿಯುವ ನೀರು ಘಟಕದಲ್ಲಿ ಹಮ್ಮಿಕೊಂಡ ಕ್ಷೇತ್ರ ಅದ್ಯಯನ ಪ್ರವಾಸ ಉದ್ದೇಶಿಸಿ ಮಾತನಾಡಿದರು.
ಜನರಲ್ಲಿ ನೀರಿನ ಸದುಪಯೋಗ ಮತ್ತು ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ಕಚ್ಚಾ ನೀರನ್ನು ಪುನರಬಳಕೆ ಮಾಡುವ ವಿಧಾನ ಹಾಗೂ ಉತ್ತಮ ನೈರ್ಮಲ್ಯ ಅಭ್ಯಾಸಗಳ ಕುರಿತು ಜನರಲ್ಲಿ ವ್ಯಾಪಕವಾದ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್ ಬಿ ಕೋಳಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪವಿಭಾಗ ಬೆಳಗಾವಿ ಜಲಜೀವನ್ ಮಿಷನ್ ಯೋಜನೆ, ಗ್ರಾಮ ಪಮಚಾಯತಿ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಯೋಜನೆ ಅನುಷ್ಠಾನ ಮಾಡುವ ಕುರಿತು ಮಾಹಿತಿ ನೀಡಿದರು.
ಕಿರಿಯ ಅಭಿಯಂತರರಾದ ಮಹಿಬೂಬ್ ಅವರು ಘಟಕದ ಕಾರ್ಯನಿರ್ವಹಣೆ, ಪಂಪ್ ಹೌಸ್ ಕುರಿತು ಮಾಹಿತಿ ನೀಡಿದರು, ಜಿಲ್ಲಾ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಕುರಿತು ಮುಲ್ಲಾ ಮಾಹಿತಿ ನೀಡಿ ಈಖಿಏ ಕಿಟ್ ಮೂಲಕ ಗ್ರಾಮ ಪಂಚಾಯತಿ ಹಂತದಲ್ಲಿ ನೀರು ಪರೀಕ್ಷೆ, ಮಹತ್ವದ ಕುರಿತು ತರಬೇತಿ ನೀಡಿದರು.
ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ನೀಲಮ್ಮ ಕಮತೆ, ಸಹಾಯಕ ಅಬಿಯಂತರರಾದ ಜೋಶಿ, ಖಾನಾಪುರ, ಕಿತ್ತೂರ, ಸವದತ್ತಿ ತಾಲೂಕು ಗ್ರಾಮ ಪಂಚಾಯತಿ ಅಧ್ಯಕ್ಷರು, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ತಂಡದ ನಾಯಕರು ,ಐಇಸಿ ಎಚ್‌ಆರ್‌ಡಿ ಸಿಬ್ಬಂದಿಗಳು, ಉಪಸ್ಥಿತರಿದ್ದರು.
Gadi Kannadiga > Local News > ಕ್ಷೇತ್ರ ಅದ್ಯಯನ ಪ್ರವಾಸ: ಜಲಜೀವನ್ ಮಿಷನ್ ಯೋಜನೆ ಕುರಿತು ಮಾಹಿತಿ
ಕ್ಷೇತ್ರ ಅದ್ಯಯನ ಪ್ರವಾಸ: ಜಲಜೀವನ್ ಮಿಷನ್ ಯೋಜನೆ ಕುರಿತು ಮಾಹಿತಿ
Suresh03/07/2023
posted on
More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023