This is the title of the web page
This is the title of the web page

Please assign a menu to the primary menu location under menu

Local News

ಲಿಂಗಾಯತರೇ ಅನುಭವ ಮಂಟಪದ ವಾರಸುದಾರರು ೧೬ ನೇ ಶರಣ ಸಂಗಮದಲ್ಲಿ ಹೂಗಾರ ಮಾದಯ್ಯ ದಂಪತಿಗಳ ಸ್ಮರಣೆ


ಸವದತ್ತಿ : ೯೭ ಕ್ಕಿಂತ ಹೆಚ್ಚು ಉಪಜಾತಿಗಳು ಸೇರಿ ಲಿಂಗಾಯತವಾಗಿದೆ. ಲಿಂಗಾಯತರೇ ಅನುಭವ ಮಂಟಪದ ವಾರಸುದಾರರೆಂದು ಇತಿಹಾಸ ಸಾರುತ್ತದೆ ಎಂದು ಧಾರವಾಡ ಹೈಕೋರ್ಟ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ ಹೇಳಿದರು.
ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಮಾಸಿಕ ಹುಣ್ಣಿಮೆಯ ೧೬ ನೇ ಶರಣ ಸಂಗಮದಲ್ಲಿ ಹೂಗಾರ ಮಾದಯ್ಯ ದಂಪತಿಗಳ ಸ್ಮರಣೆಯ ಅನುಭಾವ ನೀಡಿದ ಅವರು, ಇಂದಿನ ಸಂಸತ್ತಿನ ಪರಿಕಲ್ಪನೆ, ಕಾನೂನು ಕುರಿತು ಚರ್ಚಿಸುವ ವ್ಯವಸ್ಥೆಯನ್ನು ಬಸವಣ್ಣನವರು ೧೨ ನೇ ಶತಮಾದಲ್ಲಿ ಅನುಭವದ ಮಂಟಪದ ಮೂಲಕ ತೋರ್ಪಡಿಸಿದ್ದರು. ಸಮಾಜದ ನ್ಯೂನ್ಯತೆಗಳನ್ನು ಸಾಹಿತ್ಯಿಕವಾಗಿ ಹೋಗಲಾಡಿಸಲು ಶ್ರಮಿಸುವಲ್ಲಿ ಶರಣರ ಪಾತ್ರ ಅಪಾರ.
ದಾನ ಮತ್ತು ದಾಸೋಹದಲ್ಲಿ ವ್ಯತ್ಯಾಸ ಸಾಕಷ್ಟಿದೆ. ದಾನದಲ್ಲಿರುವ ತಾನು ದೊಡ್ಡವನೆಂಬ ಭಾವ ದಾಸೋಹದಲ್ಲಿ ಇಲ್ಲ. ಉಪನಯನದ ವೇಳೆ ಬಸವಣ್ಣನವರ ಸಹೋದರಿಗೆ ದೀಕ್ಷೆ ನೀಡದಿರುವದನ್ನು ಪ್ರಶ್ನಿಸಿ ಮಹಿಳಾ ಹಕ್ಕು ಮತ್ತು ಸಮಾನತೆ ಕುರಿತು ಪ್ರಥಮಾದಿಯಾಗಿ ವಾದಿಸಿದರು. ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ಧ್ವನಿಯೆತ್ತಿದರು. ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನ ಸಮಾನವಾಗಿರಬೇಕೆಂದರು.
ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ ನೇ ಶತಮಾನದಲ್ಲಿಯೇ ಬಸವಣ್ಣ ಆರಂಭಿಸಿದ್ದರು. ಇಂದಿನ ಮಹಿಳೆಯರಿಗೆ ಶೇ.೨೭ ರಷ್ಟು ಮೀಸಲಾತಿ ನೀಡಿದ್ದು ಅಧಿಕವೆಂದು ವಾದಿಸುವವರಿಗೆ ಅಂದಿನ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳ ಸರಿಸಮಾನವಾಗಿ ಅಕ್ಕ ಮಹಾದೇವಿಗೆ ಚರ್ಚಿಸುವ ಅವಕಾಶ ನೀಡಿ ಆಧ್ಯಾತ್ಮಿಕ ಚಿಂತನೆ ತಿಳಿಪಡಿಸಲಾಗಿತ್ತು. ಇದು ಜಗತ್ತಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರö್ಯದ ಕುರುಹುವಾಗಿದೆ.
ಅನುಭವ ಮಂಟಪದ ಸಹವಾಸದಿಂದ ರಾಜ ಬೀದಿ ಸ್ವಚ್ಛಗೊಳಿಸುವ ಸತ್ಯಕ್ಕ ಸನಾತನ ಧರ್ಮದ ನ್ಯೂನ್ಯತೆ ಎತ್ತಿ ಹೇಳುವ ಧೈರ್ಯ ಮಾಡಿದ್ದಳು. ಕಾಯಕವನ್ನೇ ಪ್ರಧಾನ ಅಂಶವನ್ನಾಗಿಸಿಕೊಂಡು ಕಾಯಕಕ್ಕೆ ದೈವತ್ವ ಸ್ಥಾನ ನೀಡಿದರು. ತನಗೂ ಮತ್ತು ಸಮಾಜಕ್ಕೂ ಒಳಿತಾಗುವುದನ್ನು ಮಾಡುವದೇ ಕಾಯಕ. ಇದರಿಂದಲೇ ಜೀವನ ಮುಕ್ತಿ ಎಂದು ಶರಣರು ಪ್ರತಿಪಾದಿಸಿದ್ದಾರೆಂದರು.
ಈಶ್ವರ ಜಕಾತಿ ಮತ್ತು ಮಲ್ಲಿಕಾರ್ಜುನ ಹಂದೂರ ದಾಸೋಹಿಗಳಾಗಿದ್ದರು. ಈ ವೇಳೆ ಉದಯ ಹೂಗಾರ, ಲಕ್ಷ್ಮೀ ಆರಿಬೆಂಚಿ, ಕಸ್ತೂರಿ ಹೂಲಿ, ನಾಗಪ್ಪ ಪ್ರಭುನವರ, ಗಣೇಶ ಸೂಗಿ, ಬಸವರಾಜ ಕಪ್ಪನ್ನವರ, ಎಲ್.ಎಸ್. ನಾಯಕ, ಶ್ರೀಕಾಂತ ಹಟ್ಟಿಹೊಳ್ಳಿ, ನಿಂಗಪ್ಪ ಮೇಟಿ, ನಾಗಪ್ಪ ಬೆಳ್ಳಿಕುಪ್ಪಿ, ಮಂಜುನಾಥ, ಉಳ್ಳಿಗೇರಿ, ಬಸವಪ್ರಭು ಪ್ರಭುನ್ನವರ, ರಮೇಶ ಜಾಧವ, ಆನಂದ ಉಳ್ಳಿಗೇರಿ, ಮಾರುತಿ ಮೇಟಿ, ಪಾಂಡುರಂಗ ಸದರೆ, ರಾಮನಗೌಡ ಪಾಟೀಲ ಇದ್ದರು.


Gadi Kannadiga

Leave a Reply