ಗಂಗಾವತಿ: ನಗರಸಭೆಗೆ ಮೇ 2 ಶುಕ್ರವಾರ ದಿನ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿಯ ಆಯ್ಕೆ ಪ್ರಕ್ರಿಯೆ ಜರುಗಿತು. ಒಟ್ಟು 35 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ಬಹುಮತಕ್ಕೆ 18 ಮತಗಳು ಅಂತಿಮವಾಗಿದ್ದು, ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎರಡನೇ ವಾರ್ಡ್ ನಗರಸಭೆ ಸದಸ್ಯರಾದ ಹೀರಬಾಯಿ, ಉಪಾಧ್ಯಕ್ಷ ಸ್ಥಾನಕ್ಕೆ ಸುಧಾ ಸೋಮನಾಥ್ ನಾಮಪತ್ರ ಸಲ್ಲಿಸಿದರು. ಅದರಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕಾಸಿಂಸಾಬ್ ಗದ್ವಾಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಗೆಮ್ಮ ಕಿರಿಕಿರಿ ಸ್ಪರ್ಧಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೀರಾಬಾಯಿ 28 ಮತಗಳನ್ನು ಪಡೆದು ಭರ್ಜರಿ ಬಹುಮತದೊಂದಿಗೆ ಗೆದ್ದು ಆಯ್ಕೆಯಾದರು, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಖಾಸಿಂಸಾಬ್ ಗದ್ವಾಲ್ ಕೇವಲ ಎಂಟು ಮತಗಳನ್ನು ಪಡೆದು ಸೋತು ಮುಖಭಂಗ ಅನುಭವಿಸಿದರು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಧಾ ಸೋಮನಾಥ್ 29 ಮತಗಳನ್ನು ಪಡೆದು ಭರ್ಜರಿ ಬಹುಮತದೊಂದಿಗೆ ಆಯ್ಕೆಯಾದರು. ಅದರಂತೆ ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹುಲಿಗೆಮ್ಮ ಕಿರಿಕಿರಿ ಕೇವಲ ಏಳು ಮತಗಳನ್ನು ಪಡೆದು ಹೀನಾಯವಾಗಿ ಸೋತರು.
ರೆಡ್ಡಿ ಯಾರಿಗೆ ಮಾತು ಕೊಟ್ಟಿದ್ದ…?
ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಶಾಸಕ ರೆಡ್ಡಿ ಕೆ.ಆರ್.ಪಿ.ಪಿ. ಇಂದ ಸ್ಪರ್ಧಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ನಗರಸಭೆ ಸದಸ್ಯರು ಬಹಿರಂಗವಾಗಿ ರೆಡ್ಡಿ ಅವರ ಪಕ್ಷಕ್ಕೆ ಸೇರಿದ್ದರು. ಜೊತೆಗೆ ಶಾಸಕರ ಚುನಾವಣೆಯಲ್ಲಿ ರೆಡ್ಡಿಗೆ ಬೆಂಬಲ ಸೂಚಿಸಿ ರೆಡ್ಡಿ ಗೆಲುವಿಗೆ ಸಹಕಾರ ನೀಡಿದ್ದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಳೆದ ಬಾರಿಯ ಅಧ್ಯಕ್ಷ ಸ್ಥಾನವನ್ನು ಬನ್ನಿ ಗಿಡದ ಕ್ಯಾಂಪ್ ಮೌಲಾಸಾಬ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಮೂಲತಃ ಕಾಂಗ್ರೆಸ್ ಚಿನ್ಹೆ ಅಡಿಯಲ್ಲಿ ಗೆದ್ದು ಬಂದಿದ್ದರು. ಅವರು ನಗರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ರೆಡ್ಡಿ ಅವರ ಕೃಪ ಆಶೀರ್ವಾದ. ಈ ಬಾರಿ ಕೂಡ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ತನ್ನನ್ನು ನಂಬಿ ಕಳೆದ ವಿಧಾನಸಭಾ ಚುನಾವಣೆಗೆ ಬೆಂಬಲ ನೀಡಿದ ಹೀರಾಬಾಯಿ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಮೂಲತಹ ಬಿಜೆಪಿಯವರಾಗಿದ್ದರು ಸಹ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿ ರೆಡ್ಡಿ ಅವರ ಜೊತೆ ಕೆಆರ್‌ಪಿಪಿಗೆ ಸೇರಿದ್ದರು. ಆ ಒಂದು ಕಾರಣಕ್ಕಾಗಿ ಇವರು ಸಹ ಅಧ್ಯಕ್ಷರಾದರು. ನಂಬಿ ಕೆಟ್ಟವರಿಲ್ಲ ಅಂತ ಹೇಳ್ತಾರೆ ಆದರೆ ನಂಬಿ ಕೆಟ್ಟು ಹೋದರ ಮಡ್ಡೆರ್ ಪರಶುರಾಮ್ ಮತ್ತು ಅಜಯ್ ಬಿಚ್ಚಾಲಿ. ಇವರಿಬ್ಬರೂ ಮೂಲತಃ ಬಿಜೆಪಿಯವರೇ ಆದರೆ ಅಜಯ್ ಬಿಚ್ಚಾಲಿ ಕೂಡ ರೆಡ್ಡಿಯ ಜೊತೆ ಹೋಗಿದ್ದರು. ಆದರೆ ಪರಶುರಾಮ ಮಾತ್ರ ಬಿಜೆಪಿಯಲ್ಲಿ ಉಳಿದು ಕೊಂಡಿದ್ದರು. ನಗರಸಭೆಯ ಒಟ್ಟು 35 ಸದಸ್ಯರ ಪೈಕಿ 14 ಸದಸ್ಯರು ಬಿಜೆಪಿಯವರಿದ್ದರು ಸಹ ಬಿಜೆಪಿ ಸದಸ್ಯರು ಅಧ್ಯಕ್ಷರಾಗಲಿಲ್ಲ. ಆದರೆ ರೆಡ್ಡಿಯ ಜೊತೆ ಹೋದವರು ಮಾತ್ರ ಈ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ರಾದರು ಇದು ವಿಶೇಷ. ಒಟ್ಟಾರೆ ಹೇಳುವುದಾದರೆ ಗಂಗಾವತಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಗಾಲಿ ಜನಾರ್ಧನ ರೆಡ್ಡಿ ಕೆ ಆರ್ ಪಿ ಪಿ ಯಿಂದ ಗೆದ್ದು ಬಂದಿದ್ದರೂ ಕೂಡ ಅವರು ವಾಪಸ್ ಬಿಜೆಪಿ ಪಕ್ಷಕ್ಕೆ ಸೇರಿದ್ದರಿಂದ ಅವರು ಹೇಳಿದವರೇ ಮಾತ್ರ ಅಧ್ಯಕ್ಷ-ಉಪಾಧ್ಯಕ್ಷರಾಗಿ ದ್ದಾರೆ, ಆದರೆ ಕಳೆದ ಅವಧಿಯಲ್ಲಿ ಇವರು ಮುನಿಸಿಕೊಂಡ ಅಭ್ಯರ್ಥಿ ಗಳಿಗೆ ಏನು ಮಾತು ಕೊಟ್ಟಿದ್ದಾರೋ.? ಯಾರಿಗೆ ಮಾತು ಕೊಟ್ಟಿದ್ದರು ಅದನ್ನು ಅವರವರೆ ಬಲ್ಲರು. ಯಾರಿಗೆ ಕೊಟ್ಟ ಮಾತು ಈಡೇರಿದಿಯೋ ಅವರು ಖುಷಿಯಾಗಿದ್ದಾರೆ. ಯಾರಿಗೆ ಕೊಟ್ಟ ಮಾತು ಹುಸಿಯಾಗಿದೆಯೋ ಅವರು ಸದ್ಯ ಬೇಸರಗೊಂಡಿದ್ದಾರೆ. ಆದರೂ ಸಹ ಮೂಲ ಬಿಜೆಪಿ ಮತ್ತು ವಲಸಿಗ ಬಿಜೆಪಿ ಎಂಬ ಎರಡು ಗುಂಪುಗಳ ಮಧ್ಯೆ ಒಳಗೊಳಗೆ ಮುಸುಕಿನ ಗುದ್ದಾಟ ಇರುವುದಂತೂ ಸತ್ಯ.