This is the title of the web page
This is the title of the web page

Please assign a menu to the primary menu location under menu

State

ಮರಾಠ ಸಮಾಜವನ್ನು ೨ಎ ಗೆ ಸೇರಿಸಲು ಒತ್ತಾಯ


ಕೊಪ್ಪಳ. ಮರಾಠ ಸಮಾಜವನ್ನು ಹಿಂದುಳಿದ ವರ್ಗ ೨ಎ ಗೆ ಸೇರಿಸಲು ಒತ್ತಾಯಿಸಿ ಬುಧವಾರ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಹಿಂದುಳಿದ ಮರಾಠ ಸಮಾಜವನ್ನು ಸರಕಾರ ೨ಎ ಗೆ ಸೇರಿಸುವ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು. ಸದ್ಯ ಮರಾಠ ಸಮಾಜ ೩ಬಿ ವರ್ಗದಲ್ಲಿದ್ದು ಸರಕಾರದ ಯಾವುದೇ ಯೋಜನೆಗಳು ಮರಾಠ ಸಮಾಜಕ್ಕೆ ತಲುಪುತ್ತಿಲ್ಲ ಇದರಿಂದ ಮರಾಠ ಸಮಾಜದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಾವು ಹಲವು ವರ್ಷಗಳಿಂದ ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಎಲ್ಲ ಸರಕಾರಗಳು ನಮ್ಮ ಬೇಡಿಕೆ ಈಡೇರಿಕೆ ಮನಸ್ಸು ಮಾಡುತ್ತಿಲ್ಲ ಆದ್ದರಿಂದ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ರಾಜ್ಯದ್ಯಂತ ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತಿದ್ದೇವೆ ಎಂದು ಮರಾಠ ಸಮಾಜವನ್ನು ೩ಬಿ ಯಿಂದ ೨ಎ ಗೆ ಸೇರಿಸಲು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಸತ್‌ನ ಕೊಪ್ಪಳ ಜಿಲ್ಲಾಧ್ಯಕ್ಷ ಕಳಕಪ್ಪ ಜಾಧವ್, ಉಪಾಧ್ಯಕ್ಷರಾದ ಕೃಷ್ಣಪ್ಪ ಬಂಕದ, ಸುಭಾಸ್ ಮರಾಠಿ, ಕಾರ್ಯದರ್ಶಿ ಪ್ರಕಾಶ ಮಂಗಳೂರು, ಮುಖಂಡರಾದ ಗವಿಸಿದ್ದಪ್ಪ ಕಮ್ಮಾರ, ವಸಂತ ಲೊಂಡೆ, ನಾಗರಾಜ ಶಿಂಧೆ, ತಾನೋಜಿರಾವ್, ಪರಶುರಾಮ, ಹೇಮಾವತಿ ಮಂಗಳೂರು, ಬಾಳಪ್ಪ ಪವಾರ್, ಯಲ್ಲಪ್ಪ ಬಂಕದ, ಗವಿಸಿದ್ದಪ್ಪ ನಿಂಬಾಳ್ಕರ್, ಸುರೇಶ ಯಲಬುರ್ಗಿ, ಹನುಮಂತರಾವ್, ಪ್ರತಾಪ ಘೋರ್ಪಡೆ, ಸೀತಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.


Gadi Kannadiga

Leave a Reply