ಕೊಪ್ಪಳ, ನವೆಂಬರ್ ೧೪ : ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಕೊಪ್ಪಳ ಜಿಲ್ಲೆ ವ್ಯಾಪ್ತಿಗೆ ಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-೩ ರ ಬ್ಯಾಚ್-೧ ಮತ್ತು ಬ್ಯಾಚ್-೨ ಯೋಜನೆಯಡಿ ಮಂಜೂರಾದ ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ನಿರ್ವಹಣೆ ಹಂತದಲ್ಲಿರುವ ಕಾಮಗಾರಿಗಳ ಪರಿವೀಕ್ಷಣೆಯು ನವೆಂಬರ್ ೧೫ ರಿಂದ ೧೮ ರವರೆಗೆ ನಡೆಯಲಿದೆ ಎಂದು ಕೊಪ್ಪಳ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ರಾಷ್ಟ್ರೀಯ ಗುಣನಿಯಂತ್ರಣಾಧಿಕಾರಿ ಅಗರವಾಲ ಅಜಯ ಕುಮಾರ ಅವರು ಕಾಮಗಾರಿಗಳ ಪರಿವೀಕ್ಷಣೆ ಮಾಡುವರು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ : ೦೮೫೩೯-೨೩೧೦೫೪ ಗೆ ಸಂಪರ್ಕಿಸಬಹುದು ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ನ.೧೫ ರಿಂದ ೧೮ ರವರೆಗೆ ರಾಷ್ಟ್ರೀಯ ಗುಣ ನಿಯಂತ್ರಣಾಧಿಕಾರಿಗಳಿಂದ ಪರಿವೀಕ್ಷಣೆ