ಕೊಪ್ಪಳ ಮೇ ೦೩ : ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾರಟಗಿ ಪಟ್ಟಣ ಹಾಗೂ ಮರ್ಲಾನಹಳ್ಳಿ , ಸಿದ್ದಾಪುರ ಗ್ರಾಮ ಪಂಚಾಯತಿಯ ಮತಗಟ್ಟೆಗಳಿಗೆ ಚುನಾವಣಾ ವೀಕ್ಷಕರಾದ ಸ್ವಪ್ನಿಲ್ ಎಂ ನಾಯ್ಕ್ ಅವರು ಮೇ ೦೩ರಂದು ಭೇಟಿ ನೀಡಿದರು.
ಮತಗಟ್ಟೆಗಳ ಪರಿಶೀಲನೆ: ಕಾರಟಗಿ ಪಟ್ಟಣದ ಸ.ಹಿ.ಪ್ರಾ.ಶಾಲೆ ಬಾಲಕರು, ಬಾಲಕಿಯರ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪುರಸಭಾ ಕಾರ್ಯಾಲಯ ಕಟ್ಟಡ, ರೈತ ಸಂಪರ್ಕ ಕೇಂದ್ರ, ಮರ್ಲಾನಹಳ್ಳಿ ಸ.ಹಿ.ಪ್ರಾ.ಶಾಲೆ, ಗ್ರಾ.ಪಂ ಕಟ್ಟಡ, ಸಿದ್ದಾಪುರ ಗ್ರಾ.ಪಂ ಕಟ್ಟಡ, ಗ್ರಂಥಾಲಯ ಕಟ್ಟಡ, ಸ.ಹಿ.ಪ್ರಾ.ಶಾಲೆ ಮತಗಟ್ಟೆಗಳನ್ನು ಚುನಾವಣಾ ವೀಕ್ಷಕರು ಪರಿಶೀಲನೆ ಮಾಡಿದರು.
ಚೆಕ್ ಪೋಸ್ಟಗೆ ಭೇಟಿ: ಚನ್ನಳ್ಳಿ ಕ್ರಾಸ್ ಚೆಕ್ ಪೋಸ್ಟಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಸ್ವಪ್ನಿಲ್ ಎಂ.ನಾಯ್ಕ್ ಅವರು ಭೇಟಿ ನೀಡಿ, ಚುನಾವಣೆ ಸಮೀಪಿಸುತ್ತಿದ್ದು, ಚೆಕ್ ಪೋಸ್ಟಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು, ಬರುವ ಪ್ರತಿ ವಾಹನ ಮತ್ತು ಪ್ರಯಾಣಿಕರ ಲಗೇಜ್ ಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಿ ಬಿಡುವಂತೆ ಚೆಕ್ ಪೋಸ್ಟ್ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿಗಳಾದ ವೈ.ಎ.ಕಾಳೇ, ಕಾರಟಗಿ ತಾಲೂಕು ತಹಸೀಲ್ದಾರರಾದ ಎಂ. ಬಸವರಾಜ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಗಳಾದ ನರಸಪ್ಪ ಎನ್., ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಸೇರಿದಂತೆ ಕಂದಾಯ ಇಲಾಖೆ, ಪುರಸಭೆ ಸಿಬ್ಬಂದಿಗಳು, ಟಿಐಇಸಿ ಸಂಯೋಜಕರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Gadi Kannadiga > State > ಕನಕಗಿರಿ ಕ್ಷೇತ್ರ: ಮತಗಟ್ಟೆಗಳಿಗೆ ಚುನಾವಣಾ ವೀಕ್ಷಕರ ಭೇಟಿ, ಪರಿಶೀಲನೆ
ಕನಕಗಿರಿ ಕ್ಷೇತ್ರ: ಮತಗಟ್ಟೆಗಳಿಗೆ ಚುನಾವಣಾ ವೀಕ್ಷಕರ ಭೇಟಿ, ಪರಿಶೀಲನೆ
Suresh03/05/2023
posted on

More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಂಗಳೂರು: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
31/05/2023