This is the title of the web page
This is the title of the web page

Please assign a menu to the primary menu location under menu

Local News

ಮಹಾನಗರ ಪಾಲಿಕೆಯ ಆಯುಕ್ತರಿಂದ ನಗರದ ವಿವಿಧ ಪ್ರದೇಶಗಳ ಕಸ ವಿಲೇವಾರಿ ಪರಿಶೀಲನೆ


ಬೆಳಗಾವಿ, ಆ.೧೧: ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರು ಆಗಸ್ಟ್.೧೧ ೨೦೨೩ ರಂದು ಬೆಳಿಗ್ಗೆ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಸ ವಿಲೇವಾರಿಯನ್ನು ಪರಿಶೀಲಿಸಿದರು ಹಾಗೂ ಇದೇ ಸಂದರ್ಭದಲ್ಲಿ ನಾಗರಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳಿಗ್ಗೆ ೫-೩೦ ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ವಾಹನ ಚಾಲಕರಿಗೆ ಹಾಗೂ ಕ್ಲೀನರ್ಸಗಳಿಗೆ ಬೆಳಿಗ್ಗೆ ೫.೪೫ ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿ, ಸ್ವತ: ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಕಿಲ್ಲಾಕೆರೆ ಬಿಟ್ ಕಚೇರಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.
ನಗರ ಸೇವಕರಾದ ಅಫ್ರೋಜ ಮುಲ್ಲಾ ಇವರೊಂದಿಗೆ ವಾರ್ಡ ನಂ.೫ ರ ಖಡೆಬಜಾರ ಹಾಗೂ ದರ್ಬಾರ್ ಗಲ್ಲಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಸಂಬಂಧಪಟ್ಟ ನಿರೀಕ್ಷಕರಿಗೆ ಸೂಕ್ತ ಸಲಹೆ ನೀಡಿ ಸಾರ್ವಜನಿಕರ ಅಹವಾಲುಗಳ ಕುರಿತು ಚರ್ಚಿಸಿದರು.
ನಂತರ ಕೋತ್ವಾಲ್ ಗಲ್ಲಿ ಮತ್ತು ಕಾಕರ ಗಲ್ಲಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ತರಕಾರಿ ಮಾರುಕಟ್ಟೆಯ ತ್ಯಾಜ್ಯವೂ ಅದೇ ದಿನ ರಾತ್ರಿ ೯ ಗಂಟೆ ನಂತರ ವಿಲೇವಾರಿಯಾಗಬೇಕು ಎಂದು ಸಿಬ್ಬಂದಿಗಳಿಗೆ ತಿಳಿಸಿದರು. ನಂತರ ಬೃಹತ್ ತ್ಯಾಜ್ಯ ಉತ್ಪಾದಕರಾದ ಪೈ ಹೋಟೆಲಗೆ ಭೇಟಿ ನೀಡಿ ಹಸಿ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಪರಿಶೀಲಿಸಿದರು. .
ಅದೇ ರೀತಿ ಎಲ್ಲಾ ಬೃಹತ ತ್ಯಾಜ್ಯ ಉತ್ಪಾದಕರಿಗೆ ನಿರ್ದೇಶನ ನೀಡಲು ಸಭೆ ಕರೆಯಬಹೇಕು ಎಂದು ಪರಿಸರ ಅಭಿಯಂತರರಿಗೆ ತಿಳಿಸಿದರು. ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ದಂಡು ಮಂಡಳಿಯ ಅಧಿಕಾರಿಗಳಿಗೆ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿಯಾಗಬೇಕು ಎಂದು ಹೇಳಿದರು.ನಂತರ ರುಕ್ಮಿಣಿ ನಗರ ಸೇವಕರೊಂದಿಗೆ ವಾರ್ಡ್ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿ ಸ್ವಚ್ಛತೆಯನ್ನು ಕಾಪಾಡಲು ಆರೋಗ್ಯ ನಿರೀಕ್ಷಕರಿಗೆ ತಿಳಿಸಿದರು. ಅದೇ ರೀತಿ ರುಕ್ಮಿಣಿ ನಗರ್, ಉದ್ಯಾನವನಕ್ಕೆ ಭೇಟಿ ನೀಡಿ ಗಾರ್ಡನ್ ಇನ್ಸೆö್ಪಕ್ಟರ್ ಗೆ ಸಸಿಯನ್ನು ಹೇಳಿದರು.


Leave a Reply