This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾ ಆರೋಗ್ಯ ಇಲಾಖೆಯಿಂದ ಸ್ಕ್ಯಾನಿಂಗ್ ಕೇಂದ್ರಗಳ ತಪಾಸಣೆ


ಬೆಳಗಾವಿ : ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ದೊರಕಿರುವ ಭ್ರೂಣ ಪೆಟ್ಟಿಗೆಯ ಪರಿಣಾಮವಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಇಂದು ಅತಿಚುರುಕಾಗಿದೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸುಮಾರು 5 ತಂಡವಾಗಿ ನಗರದ ಸುಮಾರು 120ಕ್ಕು ಹೆಚ್ಚು ಇರುವ ಸ್ಕ್ಯಾನಿಂಗ್ ಕೇಂದ್ರ ಹಾಗೂ ಹೆರಿಗೆ ಆಸ್ಪತ್ರೆಗಳಿಗೆ ಬೇಟಿ ನೀಡಿದೆ.

ಬೇಟಿ ನೀಡಿದ ವೇಳೆ ಸ್ಕ್ಯಾನಿಂಗ್ ಸಂಭದಿಸಿದ ಯಂತ್ರ, ನೊಂದಣಿ, ಎಫ್ ಫಾರ್ಮ್, ಅದರ ದಾಖಲೆಗಳು, ಅನುಮೋದನೆ ಪತ್ರ, ಹಾಗೂ ಇತರ ಪರವಾನಿಗೆ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಯಾದ ಶಿವಾನಂದ ಮಾಸ್ತಿಹೊಳಿ ಅವರು, ಬೇಟಿನೀಡಿ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡ್ತಾ ಇದೀವಿ, ಕಾನೂನುಬಾಹಿರ ತಪಾಸಣೆ ಯಾವದೂ ಮಾಡಬಾರದೆಂದು ತಾಕಿತ್ತು ಮಾಡಿದ್ದೇವೆ, ಇಲ್ಲಿವರೆಗೆ ಎಲ್ಲಿಯೂ ಯಾವ ಲೋಪದೋಷ ಕಂಡುಬಂದಿಲ್ಲ, ಮುಂದೆ ಹಾಗೇನಾದರೂ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದರು.


Gadi Kannadiga

Leave a Reply