This is the title of the web page
This is the title of the web page

Please assign a menu to the primary menu location under menu

State

ನಂದಿಹಳ್ಳಿ ಗ್ರಾಮದ ಬಳಿ 50 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸ್ಥಾಪನೆ.


ಕೊಪ್ಪಳ :-ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದ ಬಳಿ ರೇಸ್ ಪವರ್ ಇನ್ ಫ್ರಾ ಪ್ರವೇಟ್ ಲಿಮಿಟೆಡ್ ಜೈಪೂರ (ರಾಜಸ್ಥಾನ) ಮೂಲದ ಕಂಪನಿಯು 200 ಹೆಚ್ಚು ವಿಶಾಲವಾದ ಜಮೀನಿನಲ್ಲಿ ವಿದ್ಯುತ್ ಉತ್ಪಾದನಾ ಘಟಕದ ಸೋಲಾರ್ ಪ್ಲಾಂಟ್ ನ್ನು ಪ್ರಾರಂಭಿಸಲಾಯಿತು.

ನಂದಿಹಳ್ಳಿ ಗ್ರಾಮದಲ್ಲಿ ಹತ್ತಿರ ಇರುವ ಈ ಸೋಲಾರ್ ಘಟಕದ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿದ ನಂತರ ವಿದ್ಯುತ್ ಸರಬರಾಜು ಮಾಡುವ ಬಟನ್ ಒತ್ತುವ ಮೂಲಕ ಕೆಪಿಟಿಸಿಎಲ್ ಜೆಸ್ಕಾಂನ ಸೂಪರ್ಡೆಂಟ್ ಇಂಜಿನಿಯರ್‌ ಬಸವರಾಜ ಚಾಲನೆ ನೀಡಿದರು.

ನಂತರ ರೇಸ್ ಪಾವರ್ ಇನ್ಫ್ರಾ ಪ್ರವೇಟ್ ಲಿಮಿಟೆಡ್ ಮುಖ್ಯಸ್ಥರಾದ ಸಂಜಯ್ ದೀಕ್ಷಿತ್ ಮಾತನಾಡಿ ನಂದಿಹಳ್ಳಿ ಗ್ರಾಮದ ಬಳಿ 200 ಎಕರೆಯಲ್ಲಿ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದ್ದು ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕೆಪಿಟಿಸಿಎಲ್ ಬೆನ್ನೂರು ಬಳಿ ಇರುವ 110 ಕೆ ವಿ ವಿದ್ಯುತ್ ಸ್ಟೇಷನ್ ಗೆ ಸರಬರಾಜು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಸ್ಕಾಂ AE ನಟರಾಜ್ ,AEE ವಿಜಯಕುಮಾರ್ ,ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ರೇಸ್ ಪಾವರ್ ಇನ್ ಫ್ರಾ ಪ್ರವೇಟ್ ಲಿಮಿಟೆಡ್,ಗೆ ಸಂಬಂಧಿಸಿದ , ವಿ ಬಿ ರಾಯ್ ,ವಿಜಯ್ ಪ್ರಸಾದ್ ಉಮೇಶ್ ಕುಮಾರ್ ,ಅನಿಲ್ ಶರ್ಮ, ರವಿ ಶರ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ವರದಿ:-ಆರ್ ಶರಣಪ್ಪ ಗುಮಗೇರಾ

‌‌‌‌‌ಕೊಪ್ಪಳ


Gadi Kannadiga

Leave a Reply