This is the title of the web page
This is the title of the web page

Please assign a menu to the primary menu location under menu

State

ಶ್ರೀಗವಿಸಿದ್ದೇಶ್ವರ ಜಾತ್ರೆ: ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ


ಕೊಪ್ಪಳ ಡಿಸೆಂಬರ್ ೨೩: ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಆರೋಗ್ಯ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಆರೋಗ್ಯದ ದೃಷ್ಟಿಯಿಂದ ಸೊಳ್ಳೆಗಳು ಹರಡದಂತೆ ಬ್ಲೀಚಿಂಗ್ ಪೌಡರ್ ಬಳಸುವುದು ಮತ್ತು ಜಾತ್ರೆ ನಡೆಯುವ ಸ್ಥಳದಲ್ಲಿ ತುರ್ತು ಸೇವಾ ಘಟಕವನ್ನು ಪ್ರಾರಂಭಿಸಲು ಹಾಗೂ ಈ ಕರ್ತವ್ಯಕ್ಕೆ ತಜ್ಞ ವೈದ್ಯರನ್ನು ಹಾಗೂ ಶುಶ್ರೂಕಿಯರನ್ನು ನಿರಂತರವಾಗಿ ನಿಯೋಜಿಸುವಂತೆ ತಿಳಿಸಿದ್ದಾರೆ. ಜಾತ್ರೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯವನ್ನು ನಿರ್ವಹಿಸಲು ಸೂಚಿಸಿದ್ದಾರೆ.
ಜಾತ್ರೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅವಶ್ಯಕವಾದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷಾಧಿಕಾರಿಯವರು ಗವಿಮಠದ ಅಡುಗೆ ಸಿಬ್ಬಂದಿಯೊಂದಿಗೆ ವಿಶೇಷ ಸಭೆ ನಡೆಸಿ, ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಶ್ರೀಮಠಕ್ಕೆ ಈ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಆಹಾರ ಸರಬರಾಜು ರೊಟ್ಟಿ, ಚಪಾತಿ, ಇನ್ನಿತರೆ ತರಹದ ಆಹಾರ ಸಾಮಗ್ರಿಗಳನ್ನು ಆಹಾರ ಸುರಕ್ಷಾಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿಯೇ ಭಕ್ತಾಧಿüಗಳಿಗೆ ನೀಡುವಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಠದ ಆವರಣದಲ್ಲಿ ಮುಂಭಾಗದಲ್ಲಿ ಒಂದು ಪರಿಶೀಲನಾ ಸ್ಥಳವನ್ನು ಗುರುತಿಸಿ, ಅದರಲ್ಲಿ ನಗರಸಭೆ, ಪೊಲೀಸ್ ಮತ್ತು ಆರೋಗ್ಯ ಸುರಕ್ಷಾ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಪರಿಶೀಲನಾ ಕಾರ್ಯ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.


Gadi Kannadiga

Leave a Reply