ಬೆಳಗಾವಿ; ಕೆಎಲ್ಇ ಸಂಗೀತ ವಿದ್ಯಾಲಯದ ವತಿಯಿಂದ ಮೆಲೋಡಿ ವರ್ಸಸ್ ಮೆಲೋಡಿ ಎಂಬ ರಾಗದಿಂದ ರೋಗ ಮುಕ್ತಿ ಕಾರ್ಯಕ್ರಮ ಕೆಎಲ್ಇ ಡಾಕ್ಟರ್ ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ನೆರವೇರಿತು. ಸಂಗೀತ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಯುತ ಯಾದವೇಂದ್ರ ಪೂಜಾರಿಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಈಗ ತಾನೆ ಕಲಿತಂತಹ ವಿದ್ಯಾರ್ಥಿಗಳು ವಾದ್ಯ ನುಡಿಸುತ್ತಾ ಸಂಗೀತವನ್ನು ಪ್ರಸ್ತುತಪಡಿಸಿದರು. ಶ್ರೀಯುತ ವಾಸುದೇವ ಸುತಾರ್ ಇವರು ಶಾಸ್ತ್ರೀಯ ಸಂಗೀತ ಮತ್ತು ಗಜಲ್ ಪ್ರಸ್ತುತಪಡಿಸಿದರು
ಕುಮಾರಿ ಸಮೃದ್ಧಿ ಜಾದವ್ ವಾಯ್ಲಿನ್, ಶ್ರೀಮತಿ ಜ್ಯೋತಿ ಬಿರಾದಾರ್ ಭಾವಗೀತೆ, ಶ್ರೀಮತಿ ಪ್ರತಿಭಾ ಕಳ್ಳಿಮಠ ಶ್ರೀಮತಿ ಅಶ್ವಿನಿ ಅಸುಂಡಿ ಶ್ರೀಮತಿ ಭಾರತಿ ಗಡಕರಿ ಮತ್ತು ಅನುಷ್ಕ ಇವರು ಹಾರ್ಮೋನಿಯಂ ಮೇಲೆ ಭೂಪರಾಗದ ವಚನ ಮತ್ತು ಬಂದಿಶ್ ಪ್ರಸ್ತುತಪಡಿಸಿದರು.
ಪ್ರಾಧ್ಯಾಪಕರಾದ ಶ್ರೀಯುತ ರಾಹುಲ್ ಮಂಡೂಲ್ಕರ್ ಇವರು ತಬ್ಲಾ ಸಾತ್ ನೀಡಿದರು. ಕೆ ಎಲ್ ಈ ಸಂಗೀತ ವಿದ್ಯಾಲಯದ ಕೋ ಆರ್ಡಿನೇಟರ್ ಡಾ.ರಾಜೇಂದ್ರ ಭಾಂಡನ್ಕರ್, ಪ್ರಾಂಶುಪಾಲರಾದ ಶ್ರೀಯುತ ರಾಜಾರಾಮ್ ಅಂಬೇಡ್ಕರ್, ಪ್ರಾಧ್ಯಾಪಕರಾದ ಶ್ರೀಮತಿ ದುರ್ಗಾ ನಾಟ್ಕರ್ಣಿ ಇವರು ಉಪಸ್ಥಿತರಿದ್ದರು. ಶ್ರೀಮತಿ ಪ್ರತಿಭಾ ಕಳ್ಳಿಮಠ ನಿರೂಪಿಸಿದರು
ಕೆಎಲ್ಇ ಸಂಗೀತ ವಿದ್ಯಾಲಯದ ವತಿಯಿಂದ ವಾದ್ಯ ಸಂಗೀತ ಪ್ರಸ್ತುತಿ
WhatsApp Group
Join Now