ಬೆಳಗಾವಿ : ಕನ್ನಡ ಧ್ವಜವು ಕನ್ನಡಿಗರ ನಾಡು-ನುಡಿ, ಜಲದ ರಕ್ಷಣೆಯ ಆತ್ಮ ಸಮ್ಮಾನದ ಪ್ರತೀಕವಾಗಿದೆ. ಕನ್ನಡಿಗರ ಸಂಸ್ಕೃತಿಯ, ಸಂಸ್ಕಾರದ ಉಸಿರಾಗಿದೆ. ಅದನ್ನು ಯಾರು ಎಲ್ಲೇ ಎತ್ತಿ ಹಿಡಿದರೂ, ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಗೌರವವನ್ನು ಸಲ್ಲಿಸಲೇಬೇಕು. ಕನ್ನಡ ಧ್ವಜಕ್ಕೆ ಆದ ಅವಮಾನವನ್ನು ಯಾವ ಕನ್ನಡಿಗರು ಸಹಿಸಿಕೊಳ್ಳಲಾರ, ಕನ್ನಡ ಧ್ವಜವನ್ನು ಹಿಡಿದ ವಿದ್ಯಾರ್ಥಿಯ ಮೇಲಿನ ಹಲ್ಲೆಯನ್ನು ಹಾಗೂ ಕನ್ನಡ ಧ್ವಜದ ಅವಮಾನವನ್ನು ಕ.ಸಾ.ಪ.ಬೆಳಗಾವಿ ಜಿಲ್ಲಾ ಖಂಡಿಸುತ್ತದೆ. ಎಂದು ಕ.ಸಾ.ಪ.ಬೆಳಗಾವಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಬೆಳಗಾವಿ ಜಿಲ್ಲೆಯ ಕ.ಸಾ.ಪ ಸರ್ವ ಸದಸ್ಯರು, ಸಮಸ್ತ ಕನ್ನಡಾಭಿಮಾನಿಗಳು ಖಂಡಿಸಿದ್ದಾರೆ ಎಂದು ಕ.ಸಾ.ಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ.ಮಂಗಲಾ ಶ್ರೀ ಮೆಟಗುಡ್ಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಕನ್ನಡ ಧ್ವಜಕ್ಕೆ ಅವಮಾನ ಬೆಳಗಾವಿ ಜಿಲ್ಲಾ ಕಸಾಪ ಖಂಡನೆ