This is the title of the web page
This is the title of the web page

Please assign a menu to the primary menu location under menu

State

ಅಂತರ್ ಶಾಲಾ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ


ಬೆಳಗಾವಿ- 76 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಗರದ ಸರ್ಕಾರಿ ಸರ್ದಾರ್ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷಾ ಸಂಘದ ವತಿಯಿಂದ ಅಂತರ್ ಶಾಲಾ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಉಪಪ್ರಾಂಶುಪಾಲರಾದ ಶ್ರೀ ಎಸ್.ಎಸ್.ಹಾದಿಮನಿಯವರು ದೇಶಭಕ್ತಿ ಎಂಬುದು ಪ್ರತಿಯೊಬ್ಬ ಭಾರತೀಯನ ಮನಮನಗಳಲ್ಲಿ ಮನೆಮನೆಗಳಲ್ಲಿ ಮೂಡಬೇಕು. ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುವ ಕಾರ್ಯ ನಮ್ಮಿಂದಾಗಬೇಕು.ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಸದೃಢ ಭಾರತವನ್ನು ನಿರ್ಮಿಸಲು ಪಣತೊಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ಧ ಸರಸ್ವತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ಶ್ರೀಮತಿ ಅನುಸೂಯ ಹಿರೇಮಠ ಮಾತನಾಡಿ ದೇಶಪ್ರೇಮ,ದೇಶಭಕ್ತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಭಾರತದ ಏಕತೆ ಸಮಗ್ರತೆಯನ್ನು ಸಾರುವ ದ್ಯೋತಕಗಳು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ವಲಯದ ಸುಮಾರು 12 ಶಾಲೆಯ ಮಕ್ಕಳು ಭಾಗವಹಿಸಿದ್ದರು. ಮರಾಠಿ ವಿದ್ಯಾನಿಕೇತನ ಶಾಲೆ ಪ್ರಥಮ ಬಹುಮಾನವನ್ನು ಲಿಟ್ಲ್‌ ಸ್ಕಾಲರ್ ಶಾಲೆ ದ್ವಿತೀಯ ಹಾಗು ಬಂಡಾರಿ ಶಾಲೆ ತೃತೀಯ ಬಹುಮಾನವನ್ನು ಪಡೆದವು.ಕನ್ನಡ ಶಿಕ್ಷಕರಾದ ಶ್ರೀ ರವಿ ಹಲಕರ್ಣಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಎ.ಆರ್ .ಮಠಪತಿ ಸ್ವಾಗತಿಸಿ, ಅನುಗ್ರಹ ಶಿರೋಳ ವಂದಿಸಿದರು.


Leave a Reply