ಬೆಳಗಾವಿ ೧೫- ನಗರದ ರಾಣಿ ಚೆನ್ನಮ್ಮನಗರದ ಗಾರ್ಡನ್ ಸಭಾಭವನದಲ್ಲಿ ಪತಂಜಲಿ ಯೋಗದ ರಾಜ್ಯ ಪ್ರಭಾರಿಗಳಾದ ಯೋಗಾಚಾರ್ಯ, ಭವರಲಾಲ ಆರ್ಯಾ, ಶ್ರೀಮತಿ ಆರತಿ ಕಾಂಗೊ, ಕಿರಣ ಮನೋಳಕರ ಪ್ರೇರಣೆಯಿಂದ ಪತಂಜಲಿ ಯೋಗಾ ಕ್ಲಾಸಿನಲ್ಲಿ ಯೋಗ ಶಿಕ್ಷಕ/ಶಿಕ್ಷಕಿಯರಾದ ಅರುಣ ಪುಣೇಕರ, ಶ್ರೀಮತಿ ಸುರೇಖಾ ಪುಣೇಕರ ಹಾಗೂ ಶ್ರೀಮತಿ ಶಿಲ್ಪಾ ಕುಲಕರ್ಣಿಯವರ ನೇತೃತ್ವದಲ್ಲಿ ಅಂತರರಾಷ್ಟಿö್ರÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಟದಲ್ಲಿ ಸಾಧಕ ಮಹಿಳೆಯರಿಗೆ ಫಲ, ಪುಷ್ಪವನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಕಲ್ಯಾಣ ಶೆಟ್ಟಿಯವರು ಮಾತನಾಡಿ ಕಾಲ ಬದಲಾಗಿದೆ ಪುರುಷ – ಮಹಿಳೆಯರೆಂಬ ಬೇಧ ಭಾವ ಬೇಡ. ಹೆಣ್ಣು ಹುಟ್ಟಿತೆಂದು ಮುಖ ಸಣ್ಣದು ಮಾಡದೇ, ಹೆಣ್ಣು ಸಂತತಿಯನ್ನು ಉಳಿಸಿ, ಬೆಳಸಿ ಎಂದು ಹೇಳಿದರು.
ಆಧುನಿಕ ಪ್ರಪಂಚದಲ್ಲಿ ಸ್ತಿö್ರÃ ಶಕ್ತಿ ಕುರಿತು ಸಾಹಿತಿ, ಹವ್ಯಾಸಿ ಬರಹಗಾರ್ತಿ ಶ್ರೀಮತಿ ವಿದ್ಯಾ ಉಪೇಂದ್ರ ಜೋಶಿ ವಿಷಯವನ್ನು ಮಂಡಿಸುತ್ತ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದು. ಪುರಷರಿಗಿಂತ ತಾನೇನೂ ಕಡಿಮೆಯಿಲ್ಲವೆಂದು ತೋರಿಸಿಕೊಟ್ಟಿದ್ದಾಳೆ ಎಂದು ಹೇಳಿದರು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾ ಸಾಧಕ, ಸಾಧಕಿಯರು ಉಪಸ್ಥಿತರಿದ್ದರು.
Gadi Kannadiga > Local News > ಅಂತರರಾಷ್ಟಿö್ರÃಯ ಮಹಿಳಾ ದಿನಾಚರಣೆ