This is the title of the web page
This is the title of the web page

Please assign a menu to the primary menu location under menu

State

ವಿಶ್ವ ಮಹಿಳಾ ದಿನಾಚರಣೆಯ ಶ್ರೇಯಸ್ಸು ಸಾವಿರ ವರ್ಷಗಳಷ್ಟು ಹಿಂದಿನದು-ಪ್ರೇಮಾ ಅಂಗಡಿ


ಬೆಳಗಾವಿ : ವಿಶ್ವ ಮಹಿಳಾ ದಿನಾಚರಣೆಯ ಶ್ರೇಯಸ್ಸು ಸಾವಿರ ವರ್ಷಗಳಷ್ಟು ಹಿಂದಿನದು. ಹನ್ನೆರಡನೇ ಶತಮಾನದ ಕನ್ನಡ ನಾಡಿನ ಮಹಿಳೆಯರಿಗೆ ವಿಶ್ವ ಗುರು ಬಸವಣ್ಣನವರು ಸ್ತ್ರೀ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು ಎಂದು ಲಿಂಗಾಯಿತ ಮಹಾಸಭಾ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಪ್ರೇಮ ಅಂಗಡಿ ಹೇಳಿದರು.

ಅವರು ಬೆಳಗಾವಿ ಮಹಾಂತೇಶ ನಗರದ ಮಹಾಂತಭವನದಲ್ಲಿ ಜರುಗಿದ ಮಾಸಿಕ ಅನುಭಾವ ಸತ್ಸಂಗ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅನುಭವ ಮಂಟಪದಲ್ಲಿ ಶರಣರ ಜೊತೆ ಸಮಾನವಾಗಿ ಸ್ಥಾನಮಾನಗಳನ್ನು ಪಡೆದು ಮಹಿಳೆಯರು ಪುರುಷರಷ್ಟೇ ಸಮಾನ ಹಕ್ಕುಗಳನ್ನು ಅನುಭವಿಸಿದ ಕನ್ನಡನಾಡಿನ ಶರಣೆಯರು. ಜಾಗತಿಕ ಧರ್ಮಗಳ ತತ್ವ ಸಿದ್ಧಾಂತಗಳ ತೌಲನಿಕ ಅದ್ಯಯನ ಮಾಡಿದಾಗ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಉದಾಹರಣೆ ಕಂಡು ಬರುವದಿಲ್ಲ.ಮಹಿಳೆಯರು ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆದವರೆಂದರೆ ಅದು ಲಿಂಗಾಯತ ಧರ್ಮದಲ್ಲಿ ಮಾತ್ರೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.ಹನ್ನೆರಡನೇಯ ಶತಮಾನದ ಶರಣೆ ಆಯ್ದಕ್ಕಿ ಲಕ್ಕಮ್ಮ ಪ್ರಥಮ ಲೋಕಾಯುಕ್ತೆ.ಪ್ರಥಮ ಸ್ವಚ್ಛ ಭಾರತದ ಕಲ್ಪನೆಯನ್ನು ನೀಡಿದ ಶರಣೆ ಸತ್ಯಕ್ಕ.ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ರಾಜ ಆಡಳಿತಕ್ಕೆ ದಿಟ್ಟ ಪ್ರಶ್ನೆ ಮಾಡಿದ ಮೊದಲ ಮಹಿಳೆ ವೈರಾಗ್ಯ ನಿಧಿ ಅಕ್ಕ ಮಹಾದೇವಿ.ಹೀಗೆಯೇ ಧರ್ಮದ ಸ್ವಾಭಿಮಾನ ವನ್ನು ಮೆರೆದವಳು ಶರಣೆ ಅಮ್ಮುಗೆಯ ರಾಯಮ್ಮ.ಮಹಿಳಾ ಕುಲದ ಕೀಳರಿಮೆಯನ್ನು ಮೆಟ್ಟಿ ನಿಂತು ಬಸವಣ್ಣನವರಿಗೆ ಮಾರ್ಗದರ್ಶನ ಮಾಡಿದ ಲಿಂಗಾಯತ ಧರ್ಮದ ಧೀಮಂತ ನಾಯಕಿ ಅಕ್ಕ ನಾಗಮ್ಮ.ಇತ್ತೀಚಿನ ಸಂಶೋಧನೆಯ ಪ್ರಕಾರ ಅನುಭವ ಮಂಟಪದಲ್ಲಿ ಇನ್ನೂರಕ್ಕೂ ಹೆಚ್ಚು ಶರಣೆಯರು ಭಾಗವಹಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೆರೆದ ಇತಿಹಾಸ ನಮ್ಮ ಮುಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದಜಾಗತಿಕ ಲಿಂಗಾಯತ ಮಹಾಸಬಾದ ಅದ್ಯಕ್ಷರಾದ ಶರಣ ಬಸವರಾಜ ರೊಟ್ಟಿ ಅವರು ಮಾತನಾಡುತ್ತ೨೦೨೩ ನೆಯ ಸಾಲಿನ ಬಸವ ಜಯಂತಿಯನ್ನು ವೈಭವದಿಂದ ಹಾಗೂ ಭಕ್ತಿ ಭಾವದಿಂದ ಎಪ್ರಿಲ್ ೨೮,೨೯,ಹಾಗೂ ೩೦ ರಂದು ಆಚರಿಸುವ ನಿರ್ಧಾರ ಮಾಡಲಾಗಿದೆ. ಬಸವಕಲ್ಯಾಣ ದಲ್ಲಿ ಮಾರ್ಚ ೪ ಮತ್ತು ೫ ರಂದು ಜರುಗಿದ ಪ್ರಥಮ ಲಿಂಗಾಯತ ಮಹಾಧಿವೇಶನದ ಅಭೂತಪೂರ್ವವಾಗಿ ಯಶಸ್ಸಿಯಾಗಿದೆ. ಅಲ್ಲದೇ ಕೆಲವು ರಾಜಕಾರಣಿಗಳು ವಿನಾಕಾರಣ ಲಿಂಗಾಯತರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಕೊಡುತ್ತಿದ್ದು ಅಂತಹ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಖಂಡಿಸುತ್ತದೆ ಅಲ್ಲದೆ ರಾಜಕಾರಣಿ ಸಿ.ಟಿ.ರವಿ ಅವರು ಬೇಷರತ್ತಾಗಿ ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು ಇಲ್ಲವೇ ಸಂಭಂದಿಸಿದ ರಾಜಕೀಯ ಪಕ್ಷದ ವರಿಷ್ಠರು ಅವರ ಪಕ್ಷದ ವರಿಷ್ಠರು ಸೂಕ್ತ ಕ್ರಮಜರುಗಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವದು ಅಂತಾ ಹೇಳಿದರು.
ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರ ಬೆಳಗಾವಿಯ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಗಳನ್ನು ತಮ್ಮತಮ್ಮ ಮಕ್ಕಳಿಗೆ ಹೇಳಿಕೊಡುವ ಜವಾಬ್ದಾರಿ ನಮ್ಮ ತಾಯಂದಿರದ್ದು.ಇಂತಹ ಕಾರ್ಯಕ್ರಮಗಳನ್ನು ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಾಸಭೆಯ ಮಹಿಳೆಯರು ವಚನ ನೃತ್ಯ, ವಚನ ಗಾಯನ,ಮತ್ತು ಭಾರತ ವೀರ ವನಿತೆಯರು ಎಂಬ ರೂಪಕ ಪ್ರಸ್ತುತ ಪಡಿಸಿ ಜನರನ್ನು ರಂಜಿಸಿದರು.
ಶರಣ ಬಾಳಗೌಡ ಶಂಕರ ದೊಡಬಂಗಿ ಅವರು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯಲ್ಲಿ ಶಂಕರ ಗುಡಸ,ಅನಿತಾ ಚಟ್ಟರ,ಸುಜಾತಾ ಮತ್ತಿಕಟ್ಟಿ,ಬೈಲಹೊಂಗಲದ ರಾಜೇಶ್ವರಿ ದ್ಯಾಮನಗೌಡರ ಶರಣೆ ಮಹಾನಂದಾ ಪರುಶೆಟ್ಟಿ, ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶರಣೆ ನೈನಾ ಗಿರಿಗೌಡರ ಅವರು ವಚನ ಸಂಗೀತ ನೀಡಿದರು.ಶರಣೆ ರತ್ನಾ ಬೆನಚಮರ್ಡಿ ಅವರು ಸ್ವಾಗತಿಸಿದರು. ಶರಣೆ ಅನಸೂಯಾ ಬಶೆಟ್ಟಿ ಶರಣು ಸಮರ್ಪಣೆ ಸಲ್ಲಿಸಿದರು. ಶರಣೆ ಶ್ರೀದೇವಿ ನರಗುಂದ ಹಾಗೂ ಶರಣೆ ಪ್ರೀತಿ ಮಠದ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಕತಿ,ವೈಭವ ನಗರ,ವಿನಾಯಕ ನಗರ,ಕುವೆಂಪು ನಗರ ಸಹ್ಯಾದ್ರಿ ನಗರ ಕುಮಾರಸ್ವಮಿ ಲೇ ಔಟ್ ಅಲ್ಲದೆ ನಗರದ ಸುತ್ತ ಮುತ್ತಲಿನ ಬಸವಾಭಿಮಾನಿಗಳು,ಶರಣೆ ಜ್ಯೋತಿ ಭಾವಿಕಟ್ಟಿ,ರಾಜೇಶ್ವರಿ ರಮೇಶ್ ಕಳಸಣ್ಣವರ,ಶರಣೆ ಅನ್ನಪೂರ್ಣ ಮಳಗಲಿ,ಎಸ್.ಜಿ.ಸಿದ್ನಾಳ,ಮುರಿಗೆಪ್ಪ ಬಾಳಿ,ಎಫ್ ಆರ್.ಪಾಟೀಲ, ಮಾಜಿ ನಗರ ಸೇವಕಿ ಸರಳಾ ಹೇರೆಕರ,ರಾಜೇಶ್ವರಿ ಹಿರೇಮಠ, ಮಂಗಲಾ ಕಾಕತಿಕರ,ಸುವರ್ಣ ಗುಡಸ,ಜಯಕ್ಕ ಚವಲಗಿ ,ಶಿಲಾ ಗುಡಸ,ಶೋಭಾ ಶಿವಳ್ಳಿ, ರಾಜೇಶ್ವರಿ ದೇಯನ್ನವರ,ದ್ರಾಕ್ಷಾಯಣಿ ಉಡದಾರ,ಸವಿತಾ ನಂದೆನ್ನವರ ಮುಂತಾದವರು ಉಪಸ್ಥಿತರಿದ್ದರು.


Leave a Reply