This is the title of the web page
This is the title of the web page

Please assign a menu to the primary menu location under menu

Local News

ಅಂತಾರಾಷ್ಟ್ರೀಯ ಯೋಗ ದಿನಾಚರಣೆ


8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿಯಲ್ಲಿ ಆಚರಿಸಲಾಯಿತು. ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯ “ಮಾನವೀಯತೆಗಾಗಿ ಯೋಗ”.ಇದರಂತೆ ಶಾಲೆಯ ಮಕ್ಕಳಿಗೆ ಯೋಗ’ ಶಬ್ದ ಸಂಸ್ಕೃತ ಬಾಷೆಯ ‘ಯುಜ್’ ಎಂಬ ಪದದಿಂದ ಆಗಿದೆ. ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಆರ್ಥ ಬರುತ್ತದೆ. ಯೋಗವೆಂದರೆ ‘ಸಮಾದಿ’ ‘ಉಪಾಯ’ ‘ಸಾಧನ’ ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ , ಬಾವನೆ,ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ:” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ “ಯೋಗಶ್ಚಿತ್ತ ವೃತ್ತಿ ನಿರೋಧ:” ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ ಎಂಬುದನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎಸ್ ಎನ್ ಸೂಡಂಬಿ ವಿವರಿಸಿದರು.ಯೋಗದ ಮಹತ್ವದ ಕುರಿತು ಶ್ರೀ ಡಿ ಹೆಚ್ ಮಾದರ ಯೋಗವು 8 ಅಂಗಗಳನ್ನು ಹೊಂದಿದೆ. ಇದನ್ನು ಅಷ್ಟಾಂಗಯೋಗ ಎನ್ನುವರು. ಯಮ ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ,ಧಾರಣ, ಧ್ಯಾನ, ಸಮಾಧಿ ಇವುಗಳೇ ಎಂಟು ಅಂಗಗಳು. ಯೋಗಗಳಲ್ಲಿ ಜ್ಞಾನಯೋಗ ,ಭಕ್ತಿಯೋಗ, ಕರ್ಮಯೋಗ, ಹಾಗು ರಾಜಯೋಗಗಳೆಂಬ ನಾಲ್ಕು ವಿಧಗಳಿವೆ. ಸ್ವಾಮಿ ವಿವೇಕಾನಂದರು ಹೇಳುವಂತೆ “ತನ್ನ ಸಂಪೂರ್ಣ ವಿಕಾಸವನ್ನು ಒಂದು ಜನ್ಮದಲ್ಲಿ ಅಥವಾ ಕೆಲವು ತಿಂಗಳು ಅಥವಾ ಕೆಲವು ಗಂಟೆಗಳಲ್ಲಿ ಮಾನವನು ಸಾಧಿಸಬಹುದಾದ ಸಾಧನವೇ ಯೋಗ” ವಿಶ್ವಾದ್ಯಂತ 2015ನೇ ಜೂನ್ 21ರಂದು ಮೊದಲ ಬಾರಿಗೆ 177 ರಾಷ್ಟ್ರಗಳಲ್ಲಿ ‘ವಿಶ್ವ ಯೋಗ ದಿನ’ ಆಚರಿಸಲಾಯಿತು. ಪ್ರತಿವರ್ಷವೂ ಜೂನ್ 21 ‘ಯೋಗ ದಿನ’ವನ್ನಾಗಿ ಆಚರಿಸುತ್ತೇವೆ. ಧ್ಯಾನ ,ಯೋಗಾಸನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೈಹಿಕ ವ್ಯಾಯಾಮಗಳು ಈ ದಿನದ ಪ್ರಮುಖ ಕಾರ್ಯಕ್ರಮಗಳಾಗಿವೆ.ದೇಹವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು ,ತಿರುಗಿಸುವುದು, ಚಲಿಸುವಿಕೆ ಮಾಡುವುದರಿಂದ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಜೀರ್ಣಾಂಗವ್ಯೂಹ, ಶ್ವಾಸಕೋಶ, ಹೃದಯ, ನರಮಂಡಲ, ಮಿದುಳು ಮುಂತಾದ ಎಲ್ಲ ಅಂಗಗಳ ಚಟುವಟಿಕೆಗಳು ಚುರುಕುಗೊಳ್ಳುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೇಹದ ಹಲವು ಕಾಯಿಲೆಗಳು ಯೋಗದಿಂದ ಗುಣವಾಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಮಾನಸಿಕ ಕಾಯಿಲೆಗಳು ಕೂಡ ಯೋಗದಿಂದ ಕಡಿಮೆಯಾಗುತ್ತದೆ. ಯೋಗಾಭ್ಯಾಸಿಯು ಉಸಿರಿನ ಮೇಲೆ ನಿಯಂತ್ರಣವನ್ನು ಸಾಧಿಸಲೇಬೇಕು. ಉಸಿರಿಗೂ ಮನಸ್ಸಿಗೂ ನಿಕಟ ಸಂಬಂಧವಿದೆ. ಆದ್ದರಿಂದ ಮನಸ್ಸು ಹತೋಟಿಗೆ ಬರಬೇಕಾದರೆ ಉಸಿರಿನ ನಿಯಂತ್ರಣ ಅಗತ್ಯ. ಇದರಿಂದ ನಮ್ಮ ಮನಸ್ಸಿನಲ್ಲಿರುವ ಋಣಾತ್ಮಕ ಭಾವನೆಗಳು ಅಳಿದು ಧನಾತ್ಮಕ ಭಾವನೆಗಳು ಬೆಳೆಯುತ್ತದೆ. ಮಾನಸಿಕ ಸ್ಥಿರತೆ ಹಾಗೂ ಏಕಾಗ್ರತೆಯು ಹೆಚ್ಚಾಗುತ್ತದೆ ಎಂದುಮಕ್ಕಳಿಗೆ ಮನದಟ್ಟು ಮಾಡಿದರು. ಶ್ರೀಮತಿ ಆರ್ ಪಿ ಕುಂಬಾರ ಯೋಗದ ಅವಶ್ಯಕತೆ ಹಾಗೂ
ಸೂರ್ಯ ನಮಸ್ಕಾರ ಮತ್ತು ಕಪಾಲಭಾತಿ ಪ್ರಾಣಾಯಾಮ ತೂಕ ಕಳೆದುಕೊಳ್ಳಲು ಬಲು ಉಪಯುಕ್ತಕರ. ಯೋಗಾಭ್ಯಾಸದಿಂದ ನಾವು ನಮ್ಮ ದೇಹದ ಬಗ್ಗೆ ಹೆಚ್ಚು ಅರಿಯುತ್ತೇವೆ. ಇದರಿಂದ ನಮ್ಮ ಆಹಾರ ಹಾಗೂ ದೇಹದ ತೂಕದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ.
ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶಗಳು. ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳಿವೆ. ಆರೋಗ್ಯ ದಲ್ಲಿ ಸುಧಾರಣೆ, ಮಾನಸಿಕ ಬಲವರ್ಧನೆ, ದೈಹಿಕ ಬಲ ಹೆಚ್ಚಳದ ಜತೆಗೆ ದೇಹದಲ್ಲಿನ ವಿಷಕಾರಿ ಅಂಶಗಳ ನಿವಾರಣೆ. ಪ್ರಸ್ತುತ ದಿನಗಳಲ್ಲಿ ಒತ್ತಡ ನಿವಾರಣೆ ಬಹಳ ದೊಡ್ಡ ಸಮಸ್ಯೆ. ನಿತ್ಯವೂ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಶೇಖರಣೆಯಾಗುವ ಒತ್ತಡದ ಬಿಡುಗಡೆಯಾಗುತ್ತದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಒತ್ತಡ ನಿವಾರಣೆಗೆ ರಾಮಬಾಣ. ದೇಹದಲ್ಲಿ ಶಕ್ತಿ ವರ್ಧನೆಗೆ ಯೋಗ ಪೂರಕ. ಎಲ್ಲ ಕೆಲಸಗಳನ್ನೂ ಮಾಡಿ ಅಥವಾ ನಿರಂತರವಾಗಿ ಅನೇಕ ಕೆಲಸಗಳನ್ನು ಒಮ್ಮೆಲೇ ಮಾಡಿ ದಣಿಯುವುದು ಸಹಜ. ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡಿದರೆ ನಮ್ಮ ಶಕ್ತಿ ವರ್ಧಿಸುತ್ತದೆ, ನಮ್ಮನ್ನು ತಾಜಾ ಆಗಿ ಇಡುತ್ತದೆ.ಎಂದು ತಿಳಿಸಿದರು. ಶ್ರೀ ಇಂಗಳಗಿ ದಾವಲಮಲೀಕ ಮಕ್ಕಳಿಗೆ ಸಂತೋಷದಿಂದಿರುವ ಮತ್ತು ತೃಪ್ತವಾಗಿರುವ ಮನಸ್ಸು ಸಂಬಂಧಗಳಲ್ಲಿನ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸಬಲ್ಲುದು. ಯೋಗ ಮತ್ತು ಧ್ಯಾನವು ಮನಸ್ಸನ್ನು ಸಂತೋಷವಾಗಿರಿಸಿ, ಶಾಂತಿ ಒದಗಿಸುತ್ತದೆ.ದೇಹ, ಮನಸ್ಸು ಮತ್ತು ಆತ್ಮ ಒಂದಾಗಿ ಹೆಣೆಯಲ್ಪಟ್ಟಿದೆ. ದೇಹದಲ್ಲಿ ಅಸಮತೋಲನ ಉಂಟಾದರೆ ಅದು ಮನಸ್ಸನ್ನು ಬಾಧಿಸುತ್ತದೆ. ಮನಸ್ಸಿನಲ್ಲಿ ಅಹಿತ ಭಾವನೆ ಉಂಟಾದರೆೆ ಅದು ದೇಹ ದಲ್ಲಿ ರೋಗವಾಗಿ ಪ್ರಕಟವಾಗುತ್ತದೆ. ಯೋಗಾಸನಗಳು ಅವಯವ ಗಳನ್ನು ತೀಡುತ್ತವೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ.ಯೋಗ ಮತ್ತು ಧ್ಯಾನಕ್ಕೆ ನಿಮ್ಮ ಅಂತರ್‌ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಏನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ನಿಮಗೆ ಸ್ವಯಂಪ್ರೇರಿತವಾಗಿ ತಿಳಿಯುತ್ತದೆ. ಇದರಿಂದ ಸಕಾರಾತ್ಮಕವಾದ ಫ‌ಲಿತಾಂಶಗಳು ಸಿಗುತ್ತವೆ.ಮನಸ್ಸಿನ ನೆಮ್ಮದಿಗೂ ಯೋಗ ಸಹಕಾರಿ. ದಿನದ ಯಾವುದೇ ಸಮಯದಲ್ಲೂ ಕೈಗೊಳ್ಳಬಹುದು. ಪ್ರತಿನಿತ್ಯ ಸಣ್ಣ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನವನ್ನು ಮಾಡ ಬೇಕು. ಗೊಂದಲದ ಮನಸ್ಸನ್ನು ಪ್ರಶಾಂತಗೊಳಿಸಲುಇದು ಅತ್ಯುತ್ತಮ ದಾರಿ.ಬಲಿಷ್ಠ, ಮೃದು ಮತ್ತು ನಮ್ಯವಾದ ದೇಹ ನಿಮಗೆ ಬೇಕೆಂದರೆ ಯೋಗ ನಿಮ್ಮ ದಿನಚರಿಯ ಭಾಗವಾಗಬೇಕು. ನಿತ್ಯ ಯೋಗಾಭ್ಯಾಸ, ವ್ಯಾಯಾಮ ದೇಹದ ಸ್ನಾಯುಗಳನ್ನು ಸದೃಢಗೊಳಿಸಿ, ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ.ಎಂದು ತಿಳಿಸಿ ಮಕ್ಕಳಿಗೆ ಸುಲಭವಾಗಿ ಮಾಡಬಹುದಾದ ಸರಳ ಯೋಗದ ಆಸನಗಳನ್ನು ಮಾಡಿಸಿದರು. ಒಟ್ಟಾರೆಯಾಗಿ ವಿಶ್ವ ಯೋಗದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


Gadi Kannadiga

Leave a Reply