ಕೊಪ್ಪಳ ಮೇ ೧೬ : ಕೊಪ್ಪಳ ವಿಶ್ವವಿದ್ಯಾಲಯದಿಂದ ೨೦೨೩-೨೦೨೪ನೇ ಶೈಕ್ಷಣಿಕ ಸಾಲಿಗೆ ಯುಯುಸಿಎಂಎಸ್ ತಂತ್ರಾಂಶದ ಮುಖಾಂತರ ಕೊಪ್ಪಳ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳಿಂದ ಸಂಯೋಜನಾ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರವು ಇತ್ತೀಚೆಗೆ ಹೊರಡಿಸಿರುವ ಆದೇಶದನ್ವಯ ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಇನ್ನಿತರ ಸಾಂಪ್ರದಾಯಿಕ ವಿಷಯಗಳಲ್ಲಿ ಹೊಸ ಪದವಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಇಚ್ಛಿಸುವ ಸರ್ಕಾರದ ನಿಯಮಾವಳಿಯಂತೆ ನೋಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳು/ ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸ ಸಂಯೋಜನಾ ಅರ್ಜಿಗಳು ಹಾಗೂ ಪ್ರಸ್ತುತ ವಿಶ್ವವಿದ್ಯಾಲಯದಿಂದ ಸಂಯೋಜನೆ ಹೊಂದಿರುವ ಮಹಾವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಕೋರ್ಸ್ಗಳಿಗೆ ಮುಂದುವರಿಕೆ, ವಿಸ್ತರಣೆ, ಹೊಸ ಕೋರ್ಸ್, ಹೊಸ ವಿಷಯ, ಪ್ರವೇಶ ಮಿತಿ ಹೆಚ್ಚಳ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆ ನವೀಕರಣ, ಮಹಾವಿದ್ಯಾಲಯಗಳ ಹೆಸರು ಬದಲಾವಣೆ, ಮಹಾವಿದ್ಯಾಲಯ ಸ್ಥಳಾಂತರ ಅಥವಾ ಆಡಳಿತ ಮಂಡಳಿ ಬದಲಾವಣೆ ಹಾಗೂ ಇತ್ಯಾದಿಗಳಿಗಾಗಿ ಸಂಬಂಧಿಸಿದ ದಾಖಲೆಗಳೊಂದಿಗೆ ನಿಗದಿತ ಸಂಯೋಜನಾ ಶುಲ್ಕವನ್ನು ಪಾವತಿಸಿ ಸರ್ಕಾರದ ಸಂಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಮೇ ೨೬ ಕೊನೆಯ ದಿನವಾಗಿದ್ದು, ಸಂಯೋಜನ ಶುಲ್ಕಗಳ ವಿವರ ಹಾಗೂ ಸಂಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಸಂಬಂಧಿಸಿದ ಇನ್ನಿತರ ಮಾಹಿತಿಯನ್ನು ವಿಶ್ವವಿದ್ಯಾಲಯಕ್ಕೆ ಖುದ್ದು ಭೇಟಿ ನೀಡಿ ತಿಳಿದುಕೊಳ್ಳಬಹುದು ಅಥವಾ ವಿಶ್ವವಿದ್ಯಾಲಯದ ಜಾಲತಾಣ ತಿತಿತಿ.ಞoಠಿಠಿಚಿಟuಟಿiveಡಿsiಣಥಿ.ಚಿಛಿ.iಟಿ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದ ಯುಯುಸಿಎಂಎಸ್ (hಣಣಠಿs://uuಛಿms.ಞಚಿಡಿಟಿಚಿಣಚಿಞಚಿ.gov.iಟಿ/) ತಂತ್ರಾಂಶದ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಲೇಜು ಅಭಿವೃದ್ಧಿ ಮಂಡಳಿಯ ದೂರವಾಣಿ ಸಂಖ್ಯೆ ೯೪೪೮೬೮೭೮೬೨ ಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.