This is the title of the web page
This is the title of the web page

Please assign a menu to the primary menu location under menu

State

ಸಂಘಗಳಿಗೆ ನಿವೇಶನ ಮಂಜೂರಾತಿ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಜನವರಿ ೧೦ : ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಬೇಕಾಗಿದ್ದು, ಆಕ್ಷೇಪಣೆಗೆ ಆಹ್ವಾನಿಸಲಾಗಿದೆ.
ಈ ಮೂಲಕ ಕುಷ್ಟಗಿ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕುಷ್ಟಗಿ ಪಟ್ಟಣದ ವಾರ್ಡ್ ನಂ ೦೪ ರಲ್ಲಿ ಬರುವ ಸರ್ವೇ ನಂ ೧೧೧/೨ರ ರವಿಕುಮಾರ ಪಾಲನಕರ ರವರ ವಸತಿ ವಿನ್ಯಾಸದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನದ ಕ್ಷೇತ್ರ ೬೧೮.೭೫ ಚ.ಮೀ ಇದರ ಪೈಕಿ ೩೦೯.೩೭೫ ಚ.ಮೀ ಜಾಗೆಯನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಉಳಿದ ೩೦೯.೩೭೫ ಚ.ಮೀ ಜಾಗೆಯನ್ನು ತಾಲ್ಲೂಕಾ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಾಣ ಮಾಡಲು ೨೦೨೨ರ ಡಿಸೆಂಬರ್ ೧೨ ರಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದು, ಕಾರಣ ಇದಕ್ಕೆ ಸಂಬಂಧಪಟ್ಟ ಸಂಘಕ್ಕೆ ಮಂಜೂರು ನೀಡುವಲ್ಲಿ ಸಾರ್ವಜನಿಕರಲ್ಲಿ ತಕರಾರುಗಳಿದ್ದಲ್ಲಿ, ತಮ್ಮ ತಕರಾರುಗಳನ್ನು ಈ ಪ್ರಕಟಣೆ ಪ್ರಕಟಗೊಂಡು ಒಂದು ತಿಂಗಳ ಒಳಗಾಗಿ ಪುರಸಭೆಗೆ ಸಲ್ಲಿಸಬಹುದು ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply