This is the title of the web page
This is the title of the web page

Please assign a menu to the primary menu location under menu

Local News

ಮರ ತೆರವು ಕಾರ್ಯಾಚರಣೆ: ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ


ಬೆಳಗಾವಿ,ಸೆ.೨೬: ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಿರಂತರವಾಗಿ ಸುರಿದ ಮಳೆ-ಗಾಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮರಗಳು ಬಿದ್ದು, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯಿಂಟಾಗಿದ್ದು, ದಿನಾಂಕ: ೧೩-೦೯-೨೦೨೨ ರಂದು ಮರಾಠಿ ಶಾಲೆ ನಂ. ೫ ರ ಹತ್ತಿರ ಭಾರಿ ಮಳೆಗೆ ಬೃಹತ ಗಾತ್ರದ ಮರವೊಂದು ಬಿದ್ದು ದ್ವಿಚಕ್ರ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಇನ್ನೋರ್ವನಿಗೆ ಗಾಯಗಳಾಗಿರುತ್ತವೆ.
ಈ ರೀತಿಯ ಘಟನೆಗಳು ಮರುಕಳಿಸದಂತೆ ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಜನಪ್ರತಿನಿಧಿಗಳು, ಪೋಲಿಸ ಇಲಾಖೆಯ ಅಧಿಕಾರಿಗಳು ಹಾಗು ಸಾರ್ವಜನಿಕರು ಒತ್ತಾಯಪಡಿಸುತ್ತಿರುವುದರಿಂದ ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಜಂಟಿಯಾಗಿ ದಿನಾಂಕ: ೧೬-೦೯-೨೦೨೨ ರಂದು ಬೆಳಗಾವಿ ನಗರ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಮತ್ತು ಸಾರ್ವಜನಿಕರ ಸಂಚಾರವಿರುವ ಪ್ರದೇಶಗಳಿಗೆ ಹೊಂದಿಕೊಂಡಿರುವ ಎಲ್ಲ ಪ್ರಮುಖ ಜನನಿಬಿಡ ರಸ್ತೆಗಳ ಬದಿಗಳಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ಸ್ಥಳ ಪರಿಶೀಲನೆ ಮಾಡಿ ವಿವಿಧ ಜಾತಿಯ ಮರಗಳನ್ನು ಅಪಾಯಕಾರಿ ಎಂದು ಗುರುತಿಸಿ ಸದರಿ ಮರಗಳ ಅಪಾಯಕಾರಿ ರೆಂಬೆಗಳನ್ನು ಹಾಗೂ ಕೆಲವೊಂದು ಒಣಗಿದ ಮರಗಳನ್ನು ಸಂಪೂರ್ಣ ತೆರವುಗೊಳಿಸಬೇಕಾಗಿರುತ್ತದೆ.
ಕಾರಣ ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ ೧೯೭೬ ನಿಯಮ ೮(೩) (vii) ರ ಪ್ರಕಾರ ಸದರಿ ಮರಗಳನ್ನು ತೆರವುಗೊಳಿಸಲು ಯಾವುದೇ ಆಕ್ಷೇಪಣೆ ಇದ್ದಲ್ಲಿ ಸಾರ್ವಜನಿಕರು ಲಿಖಿತವಾಗಿ ಆಕ್ಷೇಪಣೆಯನ್ನು “ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಳಗಾವಿ” ಇವರ ಕಚೇರಿಗೆ ಒಂದು ವಾರದೊಳಗೆ ಸಲ್ಲಿಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply