This is the title of the web page
This is the title of the web page

Please assign a menu to the primary menu location under menu

State

ವಿದ್ಯಾರ್ಥಿ ವೇತನ ಯೋಜನೆಯಡಿ ಅಹ್ವಾನ


ಗದಗ ಜನೆವರಿ ೨: ೨೦೨೨-೨೩ ನೇ ಸಾಲಿನ ಇಲಾಖಾ ವತಿಯಿಂದ ವಿಕಲಚೇತನರಿಗಾಗಿ ವಿದ್ಯಾರ್ಥಿ ವೇತನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ (hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ/ssಠಿ೨೨೨೩) & (hಣಣಠಿs://ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ) ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನೆವರಿ ೧೫ ಕೊನೆಯ ದಿನವಾಗಿದೆ. ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ಆಯಾ ವ್ಯಾಪ್ತಿಗೊಳಪಡುವ ಗ್ರಾ.ಪಂ ವಿಆರ್‌ಡಬ್ಲುö್ಯ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಯು ಆರ್ ಡಬ್ಲು , ತಾ.ಪಂ. ಎಂ.ಆರ್. ಡಬ್ಲುö್ಯ ಇವರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಖಾಜಾಹುಸೇನ. ಕಾತರಕಿ. ತಾಲ್ಲೂಕ ಪಂಚಾಯತ, ಗದಗ -೮೮೬೭೫೫೬೪೬೫; ಬಸವರಾಜ. ಓಲಿ. ತಾಲ್ಲೂಕ ಪಂಚಾಯತ, ರೋಣ-೯೭೪೧೬೧೫೯೨೬; ಶಶಿಕಲಾ. ವಡ್ಡಟ್ಟಿ. ತಾಲ್ಲೂಕ ಪಂಚಾಯತ, ಮುಂಡರಗಿ – ೯೬೧೧೯೨೨೪೪೫; ಭಾರತಿ. ಮುರಶಿಳ್ಳಿ. ತಾಲ್ಲೂಕ ಪಂಚಾಯತ, ಶಿರಹಟ್ಟಿ -೮೯೫೧೧೨೮೬೭೯; ಶಿವಾನಂದ ಹಾದಿಮನಿ ತಾಲ್ಲೂಕ ಪಂಚಾಯತ, ನರಗುಂದ – ೯೫೯೧೬೭೯೦೨೨ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ರೂಮ್ ನಂ:೨೯ರಲ್ಲಿನ ದೂರವಾಣಿ ಸಂಖ್ಯೆ ೦೮೩೭೨-೨೨೦೪೧೯ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply