ಬೆಳಗಾವಿ: ಕೆೆನರಾ ಬ್ಯಾಂಕಗ್ರಾಮೀಣ ಸ್ವಉದ್ಯೋಗತರಬೇತಿ ಸಂಸ್ಥೆ (ಸಿಬಿಆರ್ಸೆಟಿ) ಬೆಳಗಾವಿಯಲ್ಲಿ, ಬೆಳಗಾವಿ ಜಿಲ್ಲೆಯ ಗ್ರಾಮೀಣಯುವತಿಯರಿಗೆ ಏಪ್ರಿಲ್11 ರಿಂದ ಮೇ 5ರವರೆಗೆ 30 ದಿನಗಳ ಅವಧಿಯ ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಅಭ್ಯರ್ಥಿಗಳು 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು, ತರಬೇತಿ ಪಡೆದ ನಂತರ ಸ್ವಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯು ಉಚಿತವಾಗಿದ್ದು ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯುವಅರ್ಜಿ ನಮೂನೆಯಲಿ ್ಲತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಆಧಾರಕಾರ್ಡ ಮತು ರೇಶನ್ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರಿ ಏಪ್ರಿಲ್ 9ರೊಳಗಾಗಿ, ಸಿಬಿಆರ್ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕಗ್ರಾಮೀಣ ಸ್ವಉದ್ಯೋಗತರಬೇತಿ ಸಂಸ್ಥೆ(ಸಿಬಿ ಆರ್ಸೆಟಿ) ಪ್ಲಾಟ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟಿçಯಲ್ ಏರಿಯಾ, ಆಟೋ ನಗರ, ಬೆಳಗಾವಿ.ದೂರವಾಣಿ ಸಂಖ್ಯೆ0831-2440644, 7829601768, 8660038694, 9845750043, 8867388906, 9449860564ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.