This is the title of the web page
This is the title of the web page

Please assign a menu to the primary menu location under menu

Local News

ವಿವಿಧ ಯೋಜನೆಗಳ ಸೌಲಭ್ಯ: ಚರ್ಮ ಕುಲಶ ಕರ್ಮಿಗಳಿಂದ ಅರ್ಜಿ ಆಹ್ವಾನ


ಬೆಳಗಾವಿ,ಜುಲೈ೦೪: ಪ್ರಸಕ್ತ ೨೦೨೨-೨೩ ನೇ ಸಾಲಿಗೆ ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳಿಗೆ ಡಾ|| ಬಾಬು ಜಗಜೀವನ್‌ರಾಮ್‌ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕುಶಲಕರ್ಮಿಗಳಿಗೆ ನಿಗಮದ ವಿವಿಧ ಯೋಜನೆಗಳಾದ ತರಬೇತಿ, ಸ್ವಯಂಉದೋಗ, ವಸತಿ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆನ್ ಲೈನ್hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ನ ಪೊರ್ಟನ ಮೂಲಕ ಜುಲೈ ೩೦ ರೊಳಗೆ ಸಲ್ಲಿಸಬಹದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೪೮೦೮೮೬೨೬೬ನ್ನು ಸಂಪರ್ಕಿಸಬಹದು.
ಅರ್ಜಿ ಸಲ್ಲಿಕೆಗೆ ಸಾಮಾನ್ಯ ಆರ್ಹತೆಗಳು.
ಕಡ್ಡಾಯವಾಗಿಚರ್ಮಗಾರಿಕೆಯಲ್ಲಿ ತೊಡಗಿಸಿಕೊಂಡಿರಬೇಕು.(ಪ್ರಮಾಣ ಪತ್ರ ಲಗತ್ತಿಸುವುದು). ಇ-ಶ್ರಮ್‌ಕಾರ್ಡ ಹೊಂದಿರಬೇಕು. ಪರಿಶಿಷ್ಟ ಜಾತಿ ಸಮಗಾರ,ಮಾದರ,ಡೊರ,ಮಚಗಾರ, ಮತ್ತು ಮಾಚಿ ಉಪಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರಕುಟುಂಬದಲ್ಲಿಯಾರು ಸರ್ಕಾರಿ ನೌಕರಿಯಲ್ಲಿ ಇರಬಾರದು. ಈ ಹಿಂದೆ ನಿಗಮದಿಂದಅಥವ ಸರ್ಕಾರದ ಬೇರೆಯಾವುದೆ ವಸತಿಯೋಜನೆ ಅಡಿ ಸೌಲಭ್ಯ ಪಡೆದಿರಬಾರದು. ಒಂದುಕುಟುಂಬದಲ್ಲಿ ಒಬ್ಬರು ಮಾತ್ರ ಸೌಲಭ್ಯ ಪಡೆಯಲುಆರ್ಹರಾಗಿರುತ್ತಾರೆ. ಅರ್ಜಿದಾರರಕುಟುಂಬದ ವಾರ್ಷಿಕ ವರಮಾನವು ನಗರ ಪ್ರದೇಶದವರಿಗೆ ರೂ.೮೭,೬೦೦/-ಮತ್ತುಗ್ರಾಮೀಣ ಪ್ರದೇಶದಲ್ಲಿ ರೂ.೩೨,೦೦೦/- ಗಳ ಮಿತಯಲ್ಲಿರಬೇಕು. ಬಿದಿ ಬದಿಯಲ್ಲಿ ಕುಳಿತು ಕೆಲಸ ಮಾಡುವ ಕುಶಲ ಕರ್ಮಿಗಳಿಗೆ ಮೊದಲ ಆದ್ಯತೆ. ಮಂಜೂರಾತಿ ಪಡೆದ ಫಲನುಭವಿಯು ಆನರ್ಹರೆಂದು ಕಂಡುಬಂದಲ್ಲಿ ಮಂಜೂರಾತಿಯನ್ನುಯಾವುದೆ ಹಂತದಲ್ಲಿ ರದ್ದುಪಡಿಸುವ ಅಧಿಕಾರವನ್ನು ನಿಗಮವು ಹೊಂದಿರುತ್ತದೆ. ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply