ಗದಗ ಎಪ್ರಿಲ್ ೨೬: ನಮ್ಮೆಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿರುವ ಭೂಮಿಯು ತಾಯಿಯ ಸಮಾನ, ಈ ಹಿನ್ನೆಲೆಯಲ್ಲಿ ಅವಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಕೆ.ಗುರುಪ್ರಸಾದ ಅವರು ನುಡಿದರು.
ಗದಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪರ್ಯಾಯ ವ್ಯಾಜ್ಯ ವಿಲೇವಾರಿ ಕಟ್ಟಡದಲ್ಲಿ ಮಂಗಳವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಾಗೂ ಡೀಡ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಯ ಹೆಸರಲ್ಲಿ ನಾವು ಭೂಮಿಯ ಮೇಲೆ ಪ್ರಭಾವ ಸಾಧಿಸುತ್ತಾ ಬಂದಿದ್ದರೂ ಭೂತಾಯಿ ಸಹಿಸುತ್ತಾ ಬಂದಿದ್ದಾಳೆ. ಆದರೆ ಅದು ಮೀತಿ ಮೀರಿದಾಗ ಪ್ರಕೃತಿ ವಿಕೋಪಗಳ ಮೂಲಕ ತನ್ನ ರಕ್ಷಣೆಗೆ ಎಚ್ಚರಿಕೆಯನ್ನೂ ಸಹ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಪರಿಸರಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಆದರೆ ನಾವು ರಸ್ತೆಗಿಳಿದು ಹೋರಾಟವೇ ಮಾಡಬೇಕೆಂದಿಲ್ಲ, ಆದರೆ ನಾವು ಮನೆ ಮುಂದೆ ಒಂದು ಗಿಡ ನೆಡುವುದು, ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತಹ ಸಣ್ಣ ಸಣ್ಣ ಹೆಜ್ಜೆ ಹಾಕುವ ಮೂಲಕ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದರು.
ಅರಣ್ಯ ನಾಶಪಡಿಸುತ್ತಿರುವ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಸಹಜ. ಈ ಹಿನ್ನೆಲೆಯಲ್ಲಿ ಕಾಡನ್ನು ಅಭಿವೃದ್ಧಿ ಪಡಿಸಬೇಕು. ಅಭಿವೃದ್ಧಿ ಹೆಸರಲ್ಲಿ ಭೂಮಿಯ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಪರಿಸರದ ಭಾಗವಾಗಿರುವ ಜಲ, ವಾಯು, ಪ್ರಾಣಿಗಳನ್ನು ಸಂರಕ್ಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿಎಲ್‌ವಿ ಮಂಜುನಾಥ ಹದ್ದಣ್ಣವರ, ಡೀಡ್ಸ್ ಸಂಸ್ಥೆಯ ಪ್ರತಿನಿಧಿಗಳಾದ ಅಶ್ವಿನಿ ಹಿರೇಮಠ, ಗಿರಿಜಾ ಪಾಟೀಲ, ಶಂಕ್ರಣ್ಣ ಹಡಪದ, ಸೇರಿದಂತೆ ಪಿಎಲ್ ವಿಗಳು ಉಪಸ್ಥಿತರಿದ್ದರು. ಡೀಡ್ಸ್ ಪ್ರತಿನಿಧಿ ಫಕ್ಕಿರಮ್ಮ ಲಕ್ಕುಂಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Gadi Kannadiga > State > ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯ
ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯ
Suresh26/04/2023
posted on

More important news
ಪ್ರತಿಬಂಧಕಾಜ್ಞೆ ಜಾರಿ
08/06/2023