This is the title of the web page
This is the title of the web page

Please assign a menu to the primary menu location under menu

State

ಪಿ.ಎಂ. ಕಿಸಾನ್ ಯೋಜನೆಯ ನೆರವು ಪಡೆಯಲು ಈ ಬಿಯಮ ಕಡ್ಡಾಯವಾಗಿದೆ…  


ಬೆಳಗಾವಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷಿ ಯೋಜನೆಯಾದ ಪಿ.ಎಂ.ಕಿಸಾನ್ ಯೋಜನೆಯ ನೆರವು ಪಡೆಯಲು ಏಪ್ರಿಲ್ 2022 ರಿಂದ e-KYC ಮಾಡುವುದು ಕಡ್ಡಾಯವಾಗಿದೆ.

e-KYC ಏಕೆ ಏಕೆ?

ಪಿ.ಎಂ.ಕಿಸಾನ್ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು e-KYC ಅತ್ಯಂತ ಅವಶ್ಯವಾಗಿರುತ್ತದೆ.

e-KYC ಮಾಡಿಕೊಳ್ಳುವುದು ಹೇಗೆ ?

e-KYC ಯನ್ನು ಎರಡು ವಿಧಾನÀದಲ್ಲಿ ಕೈಗೊಳ್ಳಬಹುದಾಗಿದೆ. ರೈತರೇ ಖುದ್ದಾಗಿ ಮಾಹಿತಿಯನ್ನ್ಳು ಅಪಲೋಡ್ ಮಾಡುವುದು. CSC (Common Service Center) ನಾಗರಿಕ ಸೇವಾ ಕೇಂದ್ರಗಳ ಮೂಲಕ ಅಪಲೋಡ್ ಮಾಡುವುದು.

ರೈತರೇ ಖುದ್ದಾಗಿ e-KYC ಮಾಹಿತಿಯನ್ನ್ಳು ಅಪಲೋಡ್ ಮಾಡುವುದು ಹೇಗೆ ?

http://pmkisan.gov.in ಪೋರ್ಟಲ್‌ನ Farmer Corner ನಲ್ಲಿ e-KYC ಗೆ ಅವಕಾಶ ಒದಗಿಸಲಾಗಿದೆ. ಈಗಾಗಲೇ ಪಿ.ಎಂ. ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿರುವ ರೈತರು ಆಧಾರ ಸಂಖ್ಯೆಯನ್ನು, ನಂತರ ಆಧಾರ್ ಸಂಖ್ಯೆಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್‌ಗೆ OTP ಯು ರವಾನೆಯಾಗುತ್ತದೆ. ನಂತರ ಸ್ವೀಕರಿಸಿದ OTP ಯನ್ನು ದಾಖಲಿಸಿ, SUBMIT FOR AUTH ಎಂಬ ಬಟನ್ ಒತ್ತಬೇಕು. ಆಗ ತಂತ್ರಾAಶ ಆಧಾರಿತ ಪರಿಶೀಲನೆ ನಡೆದು e-KYC is Successfully Submitted ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ OTP ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ e-KYC ಮಾಡಬಹುದಾಗಿದೆ.

ಬಯೋಮೆಟ್ರಿಕ್ ಆಧಾರಿತ್ e-KYC ಹೇಗೆ ?

ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ e-ಏಙಅ ಗಾಗಿ ಕಳುಹಿಸಿದ OTP ಯು ಸ್ವೀಕೃತವಾಗುವುದಿಲ್ಲವೋ ಅವರು CSC (Common Service Center) ಸಾಮಾನ್ಯ ಸೇವಾ ಕೆಂದ್ರಗಳು) ಗೆ ತೆರಳಿ ರೂ. 15 ಶುಲ್ಕ ಪಾವತಿಸಿ ಬಯೋಮೆಟ್ರಿಕ್ ಆಧಾರಿತವಾಗಿ e-KYC ಮಾಡಬಹುದಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ e-KYC ಮಾಡಲಾಗುತ್ತದೆ.

ಈ ಯೋಜನೆಯ ನೆರವನ್ನು ಪಡೆಯಲು ಪ್ರತಿ ಫಲಾನುಭವಿ ರೈತನು e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. ಕಾರಣ ಯೋಜನೆಯ ನೆರವನ್ನು ಪಡೆಯುತ್ತಿರುವ ರೈತರು 31 ಮಾರ್ಚ 2022 ರೊಳಗೆ e-KYC ಮಾಡಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply