This is the title of the web page
This is the title of the web page

Please assign a menu to the primary menu location under menu

Local News

ಜನಸಾಮಾನ್ಯರಿಗೆ ಸರ್ಕಾರದ ಸಾಧನೆಗಳ ಅರಿವು ಮೂಡಿಸುವುದು ಅಗತ್ಯ


ಯಮಕನಮರಡಿ:- ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳ ಕುರಿತು ಇನ್ನೂ ಅರಿವು ಇಲ್ಲ ಡಬಲ್ ಇಂಜಿನ ಸರ್ಕಾರದ ಸಾಧನೆಗಳನ್ನು ತಿಳಿಹೇಳಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುವುದೇ ಕರಪತ್ರಗಳ ವಿತರಣೆ ಕಾರ್ಯಕ್ರಮದ ಉದ್ದೇಶ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಹೇಳಿದರು.
ಅವರು ಬುಧವಾರ ದಿ. ೨೯ ರಂದು ಶಿರೂರು ಹಗೆದಾಳ ಗ್ರಾಮಗಳಿಗೆ ಬೇಟಿ £Ãಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳ ಕರಪತ್ರಗಳನ್ನು ವಿತರಿಸಿ ಮಾತನಾಡಿದರು. ಯಮಕನಮರಡಿ ಮತಕ್ಷೇತ್ರದಲ್ಲಡೆ ಬಿಜೆಪಿ ಪರ ಗಾಳಿ ಬೀಸುತ್ತಿದ್ದು, ಜನರು ಬದಲಾವಣೆ ಬಯಸಿ ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನಾಗಿ ಮಾಡಲು ತೀರ್ಮಾಸಿರಯವುದು ಕಂಡು ಬರುತ್ತದೆ.
ಈ ವೇಳೆಯಲ್ಲಿ ಯಮಕನಮರಡಿ ಬಿಜೆಪಿ ಮಂಡಳದ ಅಧ್ಯಕ್ಷರಾದ ಶ್ರೀಶೈಲ ಯಮಕನಮರಡಿ ಅಪ್ಪಯ್ಯ ಜಾಜರಿ, ಯಮಕನಮರಡಿ ರೈತಮೊರ್ಚಾ ಅಧ್ಯಕ್ಷ ಸಿದ್ದಲಿಂಗ ಸಿದ್ದಗೌಡರ, ಕರಗುಪ್ಪಿ ಗ್ರಾ.ಪಂ. ಅಧ್ಯಕ್ಷ ಗುರುಸಿದ್ದ ಪಾಯನ್ನವರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ ಮೊರ್ಚಾ ಉಪಾಧ್ಯಕ್ಷ ಬಸವರಾಜ ಬರಗಾಲಿ, ಬಸವರಾಜ ಪೂಜೇರಿ, ಯಲ್ಲಪ್ಪ ಗಡಕರಿ, £ಂಗಪ್ಪ ದಾಸ, ಬಸವರಾಜ ನಾಯಿಕ, ಅರ್ಜುನ ಬಡಕರಿ, ಭರಮಪ್ಪಾ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.


Leave a Reply