This is the title of the web page
This is the title of the web page

Please assign a menu to the primary menu location under menu

State

ಇಟಗಿ: ಆದರ್ಶ ವಿದ್ಯಾಲಯದ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಜೂನ್ ೨೮ : ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ೨೦೨೩-೨೪ನೇ ಸಾಲಿನ ೭ನೇ ತರಗತಿ ೮ನೇ ತರಗತಿ ಮತ್ತು ೯ನೇ ತರಗತಿಯಲ್ಲಿ ಖಾಲಿ ಸ್ಥಾನಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇಟಗಿ ಆದರ್ಶ ವಿದ್ಯಾಲಯದಲ್ಲಿ ೭ನೇ ತರಗತಿಯಲ್ಲಿ ನಾಲ್ಕು ಸೀಟುಗಳು, ೮ನೇ ತರಗತಿಯಲ್ಲಿ ಎಂಟು ಸೀಟುಗಳು) ಹಾಗೂ ೯ನೇ ತರಗತಿಯಲ್ಲಿ ಹತ್ತು ಸೀಟುಗಳು ಖಾಲಿ ಇದ್ದು, ಈ ಸ್ಥಾನಗಳನ್ನು ಸಂಬಂಧಿಸಿದ ಖಾಲಿ ಸೀಟಿನ ಮೀಸಲಾತಿಯನ್ವಯ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾಗಿದೆ. ಪ್ರವೇಶ ಪರೀಕ್ಷೆಯು ವಸ್ತು ನಿಷ್ಠ ಮಾದರಿಯ ೧೦೦ ಅಂಕಗಳಿಗೆ ನಡೆಯುತ್ತದೆ.
ಅರ್ಜಿಗಳು ಆದರ್ಶ ವಿದ್ಯಾಲಯ ಇಟಗಿ, ಇಲ್ಲಿ ಲಭ್ಯವಿದ್ದು, ಆಸಕ್ತ ಮತ್ತು ಅರ್ಹರು ಜುಲೈ ೦೭ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯು ಜುಲೈ ೧೫ ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಸರಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ಯಲಬುರ್ಗಾ, ಇಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು, ಆದರ್ಶ ವಿದ್ಯಾಲಯ ಇಟಗಿ, ದೂ.ಸಂ: ೯೯೪೫೪೨೦೯೫೭ ಹಾಗೂ ೮೪೯೪೮೫೮೧೮೭ಗೆ ಸಂಪರ್ಕಿಸಲು ಇಟಗಿ ಆದರ್ಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply