ಬೆಳಗಾವಿ : ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ.), ಹಿಂದುಸ್ತಾನ್ಏರೋನಾಟಿಕ್ಸ್ ಲಿ., ಬೆಂಗಳೂರು ಸಹಯೋಗದಲ್ಲಿ ‘ಅಪ್ರೆಂಟೈಸ್ಶಿಪ್ ಕಾಯ್ದೆ 1961’ರ ಅಡಿಯಲ್ಲಿ “ಐಟಿಐ (ಫಿಟ್ಟರ್, ಟರ್ನರ್, ಮಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ಫೌಂಡ್ರಿಮ್ಯಾನ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ)” ಟ್ರೇಡ್ಗಳನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಶಿಶಿಕ್ಷು (ಅಪ್ರೆಂಟಿಶಿಪ್) ತರಬೇತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗಾಗಿ ಅವಶ್ಯವಿರುವ ದಾಖಲಾತಿಗಳು:
ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಪ್ರತಿ, ಐ.ಟಿ.ಐ. ಅಂಕಪಟ್ಟಿಗಳ ಸ್ವದೃಢೀಕೃತಪ್ರತಿಗಳು, ಎನ್.ಟಿ.ಸಿ. (ನ್ಯಾಷನಲ್ಟ್ರೇಡ್ ಸರ್ಟಿಫಿಕೇಟ್) ಪ್ರಮಾಣ ಪತ್ರದ ಪ್ರತಿ, ಜಾತಿ/ಅಂಗವಿಕಲ/ಸಶಸ್ತ್ರ ಸಿಬ್ಬಂದಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ ಮಾತ್ರ), ಆಧಾರ್ಕಾರ್ಡ್ ಹಾಗೂ ಪ್ಯಾನ್ಕಾರ್ಡ್ನ ಪ್ರತಿ, ಎನ್.ಸಿ.ವಿ.ಟಿ. ಪೋರ್ಟಲ್ ನೋಂದಣ ಪ್ರತಿ ಬೇಕಾಗುತ್ತದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕೊಠಡಿ ಸಂಖ್ಯೆ: ಟಿಪಿ2 & ಟಿಪಿ3, ತಳಮಹಡಿ, ಸುವರ್ಣವಿಧಾನಸೌಧ, ಬೆಳಗಾವಿ ಇಲ್ಲಿಗೆ ಖುದ್ದಾಗಿ ಏಪ್ರಿಲ್ 28 2022ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.