ಕೊಪ್ಪಳ,: ವೀರಶೈವ ಧರ್ಮದ ಮೂಲ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವವನ್ನು ಮಾ.೧೯ ರವಿವಾರ ವೀರಮಾಹೇಶ್ವರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕೊಪ್ಪಳ ನಗರದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಹಿರಿಯ ವಕೀಲ ಹಾಗೂ ಜಂಗಮ ಸಮಾಜ ಮುಖಂಡ ವಿ.ಎಸ್ ಭೂಸನೂರಮಠ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಪ್ರಸ್ತುತ ಜಯಂತಿಯಲ್ಲಿ ಜಂಗಮ ವಟುಗಳ ಆಯ್ಯಾಚಾರ, ಲಿಂಗದೀಕ್ಷೆ ಸೇರಿದಂತೆ ಇತರೆ ಸಾಂಪ್ರದಾಯಿಕ ವಿಧಿ ವಿಧಾನಗಳು ಜರುಗುವವು. ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ ‘ಸಾರೋಟ’ದಲ್ಲಿ ಉಜ್ಜಯಿ£ ಶ್ರೀಗಳು ಭಾಗವಹಿಸುವರು ಎಂದರು. ಸಮಾಜದ ಮುಖಂಡ ವೀರೇಶ ಮಹಾಂತಯ್ಯನಮಠ ಮಾತನಾಡಿ, ರವಿವಾರ ಬೆಳಿಗ್ಗೆ ೮ ಘಂಟೆಗೆ ಕುಂಭ, ಕಳಸ, ಸಕಲ ವಾದ್ಯಗಳೊಂದಿಗೆ ಕೋಟೆಯ ರಸ್ತೆಯಲ್ಲಿರುವ ಶ್ರೀಮಹೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆಯು ಗಡಿಯಾರ ಕಂಬದ ಮುಖಾಂತರ ಜವಾಹರ ರಸ್ತೆ, ಅಶೋಕ ಸರ್ಕಲ್ ಮೂಲಕ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಸಂಪನ್ನವಾಗುತ್ತದೆ. ನಂತರದಲ್ಲಿ ಬೆಳಗ್ಗೆ ೧೧ ಗಂಟೆಗೆ ಧಾರ್ಮಿಕ ಚಿಂತನಾಗೋಷ್ಠಿಗಳು ಜರುಗುವವು. ಉಜ್ಜಯಿ£ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮೀಜಿ, ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾ£ಧ್ಯವನ್ನು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ಅನೇಕ ಜನಪ್ರತಿ£ಧಿ, ಅಧಿಕಾರಿಗಳು ಮತ್ತು ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಯ್ಯ ಹಿರೇಮಠ, £Ãಲಕಂಠಯ್ಯ ಹಿರೇಮಠ, ವೀರುಪಾಕ್ಷಯ್ಯ ಗದಗಿನಮಠ, ಅಜ್ಜಯ್ಯ ಹಿರೇಮಠ, ನಾಗಭೂಷಣ ಸಾಲಿಮಠ, ಬಸಯ್ಯ ಹೆಚ್.ಎಂ, ಕೊಟ್ರುಬಸಯ್ಯ, ಭರತ್ ಗದಗಿನಮಠ, ಕಲ್ಲಯ್ಯ, ಪಂಪಯ್ಯ ಹಿರೇಮಠ, ಬಸವಲಿಂಗಯ್ಯ ಗದಗಿನಮಠ ಸೇರಿದಂತೆ ಇತರರು ಇದ್ದರು.
Gadi Kannadiga > State > ಮಾ.೧೯ರಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ