This is the title of the web page
This is the title of the web page

Please assign a menu to the primary menu location under menu

State

ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ


ಕುಷ್ಟಗಿ:-ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಘಟಕ ಕುಷ್ಟಗಿ ವತಿಯಿಂದ ಇಂದು ದಿನಾಂಕ: 23-04-2023 ರಂದು ಕುಷ್ಟಗಿಯಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿದ್ದ ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವ ಬಯ್ಯಾಪೂರ ಅವರು, ಬಸವಭವನದ ಆವರಣದಲ್ಲಿರುವ ಬಸವೇಶ್ವರರ ಮತ್ಥಳಿಗೆ
ಹೂಮಾಲೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಸಂತೋಷ ತೋಟದ ಅವರು ಮಾತನಾಡಿ,
ಬಸವಣ್ಣನವರು 12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಧೀಮಂತರು, ಅವರು ತಮ್ಮ ವಚನಗಳ ಮೂಲಕ ಜನರಲ್ಲಿ ಬೇರೂರಿದ್ದ ಮೂಢನಂಬಿಕೆ, ಅಂಧಃಶ್ರದ್ಧೆಗಳ ವಿರುದ್ಧ ಜಾಗೃತಿಯನ್ನು ಮೂಡಿಸಿದರು. ಜಾತಿ ವ್ಯವಸ್ಥೆ ನಿರ್ಮೂಲನೆಗೆ ಹೋರಾಡಿದ್ದರು. ಅವರಂತೆಯೇ ಉಳಿದ ಶಿವಶರಣರೂ ತಮ್ಮ ವಚನಗಳ ಜನರನ್ನು ಜಾಗೃತಿಗೊಳಿಸಿದರು. ಕಾಯಕದ ಮಹತ್ವವನ್ನು ತಿಳಿಸಿದ ಬಸವೇಶ್ವರರ ನಡೆ ಅನುಕರಣನೀಯ ಎಂದರು. ಬಸವೇಶ್ವರರ ಭಾವಚಿತ್ರಕ್ಕೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.
ಮೂಲಕ ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ದೊಡ್ಡಬಸವ ಎಸ್‌.ಸಿಂಗ್ರಿ, ರಂಜಾನ್‌ ಸಾಬ ನದಾಫ್, ರಹೀಮಸಾಬ ಗುಮಗೇರಾ, ಶ್ಯಾಮರಾಜ ಬಡಿಗೇರ, ಅಮರೇಶ ಗೋನಾಳ, ಬಸವರಾಜ ಗೋನಾಳ, ಮಂಜುನಾಥ ನಾಯಕ, ಯಂಕಪ್ಪ ಜರಗಡ್ಡಿ, ಶಂಕ್ರಯ್ಯ ಬೆನಕನಾಳ, ಚನ್ನಪ್ಪ ಗಡ್ಡದ, ವೀರಭದ್ರಯ್ಯ ಕಂದಕೂರ, ವೀರೇಶ ಹುನಕುಂಟಿ,
ಯಲ್ಲಪ್ಪ ಹೊಸಮನಿ, ರಾಮಣ್ಣ ದಿವಾನರ ಇತರರು ಇದ್ದರು.


Leave a Reply