This is the title of the web page
This is the title of the web page

Please assign a menu to the primary menu location under menu

Local News

ನ. ೧೯ ರಂದು ಜಗಜ್ಯೋತಿ ಶ್ರೀ ಬಸವೇಶ್ವರ ಪೌರಾಣಿಕ ನಾಟಕ ಪ್ರದರ್ಶನ


ಬೆಳಗಾವಿ, ನ.೧೮: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು, ಎಂ.ಕೆ ಹುಬ್ಬಳಿಯ ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘ (ರಿ) ಇವರ ಸಹಯೋದಲ್ಲಿ ಶನಿವಾರ (ನ.೧೯) ರಾಮದುರ್ಗ ತಾಲೂಕಿನ ಹಲಗತ್ತಿ ಹಳೆ ಗ್ರಾಮ ಪಂಚಾಯತಿಯ ಎದುರಿಗೆ ನಂದಕುಮಾರ ರು. ದೊಡವಾಡ ಅವರ ಕಲಾ ತಂಡದಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.ಶಿಕ್ಷಕರಾದ ಈರಣ್ಣ ಮುಳ್ಳುರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಉದ್ಘಾಟಕರಾಗಿ ಪಿ.ಎಪ್. ಪಾಟೀಲ ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ ಅವರು ಜ್ಯೋತಿ ಬೆಳಗಿಸಲಿದ್ದಾರೆ.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಿ. ಬಿ ರಂಗನಗೌಡ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸೋನವ್ವ ದೊಡವಾಡ, ಗ್ರಾಂ.ಪ ಉಪಾಧ್ಯಕ್ಷೆ ಲಲಿತಾ ಹೂಗಾರ ಅವರು ಉಪಸ್ಥಿತರಿರುವರು ಎಂದು ಕರ್ನಾಟಕ ಸರ್ವ ಕಲಾವಿದ ಹಿತ ರಕ್ಷಣಾ ಸಂಘ (ರಿ) ಅಧ್ಯಕ್ಷರಾದ ಮಲಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply