This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ “ಜಾಗೃತಿ ಜಾಥಾ”

????????????????????????????????????

ಬೆಳಗಾವಿ: ಸಮ ಚಿತ್ತ ಯೋಚನೆಗಳು ಆತ್ಮಹತ್ಯೆಯ ವಿಚಾರಗಳನ್ನು ದೂರಗೊಳಿಸುತ್ತದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಾನಸಿಕ ರೋಗ ಚಿಕಿತ್ಸಾ ವಿಭಾಗ ಹಾಗೂ ಕೆ ಎಲ್ ಇ ಇನ್ಸಿ÷್ಟಟ್ಯುಟ್ ಆಫ್ ನರ್ಸಿಂಗ್ ಸೈನ್ಸ ನ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಜಾಗೃತಿ ಜಾಥಾ” ದ ಉದ್ಘಾಟನಾರ್ಥವಾಗಿ ಮಾತನಾಡುತ್ತಿದ್ದರು. ಕ್ಷಣ ಮಾತ್ರದ ಕೆಟ್ಟಯೋಚನೆಗೊಳಗಾಗಿ ಇಂದು ನಮ್ಮ ಯುವ ಜನಾಂಗವು ಆತ್ಮಹತ್ಯೆಯಂತಹ ಆಲೋಚನೆಗಳಿಗೆ ತುತ್ತಾಗುತ್ತಲಿದ್ದಾರೆ. ನಮ್ಮ ಭಾರತದಲ್ಲಿ ಪ್ರತಿ ದಿನ ಸುಮಾರು ೪೫೦ ಜನ ಆತ್ಮಹತ್ಯೆಗೆ ಒಳಗಾಗುತ್ತಿರುವದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಇದರ ಜಾಗೃತಿಗಾಗಿಯೇ ಪ್ರತಿ ವರ್ಷ ಸೆಪ್ಟೆಂಬರ ೧೦ ರಂದು “ವಿಶ್ವ ಆತ್ಮಹತ್ಯೆ ತಡೆ” ದಿನಾಚರಣೆಯನ್ನು ಆಚರಿಸಲಾಗುತ್ತದೆ ಆದರೆ ಕಾರಣಾಂತರಗಳಿಂದ ನಾವು ಇಂದು ಆಚರಿಸುತ್ತಿದ್ದೇವೆ. ಕ್ಷಣ ಮಾತ್ರದ ಕೆಟ್ಟ ಆಲೋಚನೆಗೆ ಒಳಗಾಗದೇ ಶಾಂತ ಚಿತ್ತತೆಯಿಂದ ಯೋಚಿಸಿ ನಡೆದÀರೆ ಸುಖಮಯ ಜೀವನ ಸಾಗಿಸಬಹುದು ಎಂದು ತಿಳುವಳಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಹೆಸರಾಂತ ಮಾನಸಿಕ ರೋಗ ತಜ್ಞ ಡಾ. ಸುಮಿತಕುಮಾರ ದುರ್ಗೊಜಿ ಅವರು ಮಾತನಾಡುತ್ತ ಆತ್ಮಹತ್ಯೆ ಆಲೋಚನೆ ಇದು ಒಂದು ಮಾನಸಿಕ ರೋಗ ಲಕ್ಷಣದ ಭಾಗವಾಗಿದೆ. ಇಂತಹ ಆಲೋಚನೆಗಳು ಬರುವ ಮುಂಚೆ ಕೆಲವೊಂದು ಲಕ್ಷಣಗಳನ್ನು ತೋರಿಸುತ್ತದೆ. ತಮ್ಮ ಸಂಭಂದಿಕರಿಗೆ, ಆತ್ಮೀಯರಿಗೆ ಭೇಟಿಯಾಗುವದು, ಜಿಗುಪ್ಸೆ ಹೊಂದಿದ ಜೀವನ ಪದ್ದತಿ ಹೀಗೆ ಅನೇಕ ರೀತಿಯ ಲಕ್ಷಣಗಳನ್ನು ತೋರುತ್ತಾರೆ. ಆದರೆ ಇಂತಹ ಲಕ್ಷಣಗಳುಳ್ಳ ವ್ಯಕ್ತಿಗಳನ್ನು ತಕ್ಷಣ ಮಾನಸಿಕ ರೋಗ ಚಿಕಿತ್ಸಕರಲ್ಲಿಗೆ ಕರೆದೊಯ್ದರೆ ತಕ್ಕ ಉಪಚಾರಮಾಡಿ ಆತನು ಮತ್ತೆ ಸಾಮಾನ್ಯ ಜೀವನ ನಡೆಸುವಂತೆ ಮಾಡಬಹುದಾಗಿದೆ ಎಂದು ತಿಳುವಳಿಕೆ ನೀಡಿದರೆ.
ಮತ್ತೊಬ್ಬ ಅತಿಥಿಗಳಾಗಿ ಉಪಸ್ಥಿತರಿದ್ದ ಕೆ ಎಲ್ ಇ ಸೆಂಟಿನರಿ ಇನ್ಸಿ÷್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ ಪ್ರಾಂಶುಪಾಲರಾದ ಶ್ರೀ. ವಿಕ್ರಾಂತ ನೇಸರಿ ಅವರು ಮಾತನಾಡುತ್ತ ಇಂದು ನಾವು ಸುದ್ದಿಮಾಧ್ಯಮಗಳಲ್ಲಿ ಸಾಲಬಾಧೆ, ಶಿಕ್ಷಣದಲ್ಲಿ ಹಿಂದುಳಿಕೆ, ಮನೋಕ್ಲೇಷ, ಕೌಟುಂಬಿಕ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಆತ್ಮಹತ್ಯೆಯಂತಹ ಪರಿಣಾಮಗಳಿಗೆ ಒಳಗಾಗುತ್ತಿರುವ ಸಂಖ್ಯೆ ಅಷ್ಟಿಷ್ಟಲ್ಲ ಇದರಿಂದ ಆತನ ಕುಟುಂಬ ಹಾಗೂ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು. ಇದು ನಮ್ಮ ಮೇಲಷ್ಟೇ ಅಲ್ಲ ನಮ್ಮ ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕ್ಷಣಮಾತ್ರದ ಕೆಟ್ಟ ಯೋಚನೆಗಳನ್ನು ಕೈಬಿಟ್ಟು ತಕ್ಕ ಉಪಚಾರವನ್ನು ಹೊಂದುವದು ಉತ್ತಮವೆಂದು ತಿಳುವಳಿಕೆ ನೀಡಿದರು.
ಜಾಥಾವು ಬೆಳಗಾವಿ ನಗರದ ನಾಥಪೈ ವೃತ್ತದಿಂದ ಪ್ರಾರಂಭವಾಗಿ ವಡಗಾವಿಯಯಳ್ಳೂರ ಕ್ರಾಸ ಮುಖೇನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯನ್ನು ತಲುಪಿತು. ಜಾಥಾದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಮಸ್ತ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಮತ್ತು ಕೆ ಎಲ್ ಇ ಸೆಂಟಿನರಿ ಇನ್ಸಿ÷್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ ಭೋದಕ, ಭೋದಕೇತರ ಸಿಬ್ಬಂದಿ ಹಾಗೂ ೧೫೦ ಕ್ಕೂ ಅಧಿಕವಿದ್ಯಾರ್ಥಿಗಳು ಭಾಗವಹಿಸಿ “ಆತ್ಮಹತ್ಯೆ ತಡೆ”ಯ ಘೋಷವಾಖ್ಯಗಳನ್ನು ಕೂಗುತ್ತ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು.

 


Gadi Kannadiga

Leave a Reply