This is the title of the web page
This is the title of the web page

Please assign a menu to the primary menu location under menu

Local News

ಕಿರು ಚಿತ್ರ ಮೂಲಕ ಜಲಜೀವನ್ ಮಿಷನ್ ಯೋಜನೆ


ಬೆಳಗಾವಿ, ಫೆ.೧೬ : ಜಲಜೀವನ್ ಮಿಷನ್ ಯೋಜನೆಯ ಕುರಿತಾದ ಕಿರು ಚಿತ್ರ ಪ್ರದರ್ಶನ ಮಾಡಿ ಸಮುದಾಯದ ಜನರಿಗೆ ಜಲ ಸಂರಕ್ಷಣೆ, ನೀರಿನ ಪ್ರಜ್ಞಾವಂತ ಬಳಕೆ ಮತ್ತು ಹಸಿರೀಕರಣ, ಸಮುದಾಯ ವಂತಿಗೆ ಜಲಜೀವನ್ ಮಿಷನ್ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಶಶಿಕಾಂತ ನಾಯಕ ಅವರು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಗುರುವಾರ (ಫೆ.೧೬) ನಡೆದ ಜಿಲ್ಲಾ ಪಂಚಾಯತಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಶಾಲಾ ಮಕ್ಕಳಿಗೆ ಹಾಗೂ ಸಮುದಾಯಕ್ಕೆ ಕಿರು ಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಅನುಷ್ಠಾನವಾಗುವ ಗ್ರಾಮಗಳಲ್ಲಿ ಸಮುದಾಯ ಈ ಯೋಜನೆಯಲ್ಲಿ ೧೦% ವಂತಿಗೆ ನೀಡಬೇಕು. ಕೇಂದ ರಾಜ್ಯ ಸರಕಾರಗಳು ೯೦% ಹಣ ವಿನಿಯೋಗಿಸುತ್ತಿವೆ. ಹೀಗಾಗಿ ಜನರಲ್ಲಿ ನೀರಿನ ಉಪಯೋಗ ಮತ್ತು ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ಕಚ್ಚಾ ನೀರನ್ನು ಪುನರ್ ಬಳಕೆ ಮಾಡುವ ವಿಧಾನ ಹಾಗೂ ಉತ್ತಮ ನೈರ್ಮಲ್ಯ ಅಭ್ಯಾಸಗಳ ಕುರಿತು ಜನರಲ್ಲಿ ವ್ಯಾಪಕವಾದ ಅರಿವು ಮೂಡಿಸಲಾಗುತ್ತಿದೆ ಎಂದರು
ಜಿಲ್ಲಾ ಯೋಜನಾ ಜಲ ಜೀವನ ಮಿಷನ್ ವ್ಯವಸ್ಥಾಪಕರಾದ ನೀಲಮ್ಮ ಕಮತೆ ಅವರು ಮಾತನಾಡಿ ಜಲ ಜೀವನ್ ಮೀಷನ್ ಯೋಜನೆ ಸರಕಾರದ ಒಂದು ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಇದರ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಈ ಕಿರು ಚಿತ್ರದಿಂದ ಜನರಿಗೆ ಯೋಜನೆಯ ಕುರಿತು ಮಾಹಿತಿ ನೀಡಲಿದ್ದಾರೆ ಹಾಗು ಬೆಳಗಾವಿ ವಿಭಾಗದ ೧೪೪ ಯೋಜನಾ ಅನುಷ್ಠಾನ ಹಳ್ಳಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಹಾಯಕ ಅಬಿಯಂತರರು, ತಂಡದ ನಾಯಕರು, ಐಇಸಿ ಎಚ್‌ಆರ್‌ಡಿ ಸಿಬ್ಬಂದಿಗಳು, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply