This is the title of the web page
This is the title of the web page

Please assign a menu to the primary menu location under menu

Local News

ಏ.೩೦ ರಂದು ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ


ಬೆಳಗಾವಿ,ಏ.೧೮ : ssಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷಯನ್ನು ಏಪ್ರಿಲ್ ೩೦, ೨೦೨೨ ರಂದು ಮುಂಜಾನೆ ೧೦:೩೦ ಗಂಟೆಯಿಂದ ಮಧ್ಯಾಹ್ನ ೧:೩೦ ಗಂಟೆಯವರಗೆ ನಡೆಸಲಾಗುವುದು. ಸಂಬಂಧಿಸಿದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು hಣಣಠಿs://ತಿತಿತಿ.ಟಿvsಚಿಜ missioಟಿಛಿ ಟಚಿssix .iಟಿ ವೆಬ್ ಸೈಟ್ ಮೂಲಕ ಪಡೆದುಕೊ ಳ್ಳಬಹುದಾಗಿದೆ.
ವಿದ್ಯಾರ್ಥಿಗಳು ವೆಬ್ ಸೈಟ್ ನ್ನು ಓಪನ ಮಾಡಿದ ಕೂಡಲೇ ಲಾಗ್ ಇನ್ ಮಾಡಬೇಕು. ನಂತರ ತಮ್ಮ ನೊಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಬೇಕು. ಪಾಸ್ ವರ್ಡ್ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಜನ್ಮ ದಿನಾಂಕವಾಗಿರುತ್ತದೆ. ಆ ಜನ್ಮ ದಿನಾಂಕವನ್ನು ನಮೂದಿಸುವಾಗ ಸಂಖ್ಯೆಗಳನ್ನು ಮಾತ್ರ ಬಳಸಬೇಕು ಮತ್ತು ಸಂಖ್ಯೆಗಳ ಮಧ್ಯದಲ್ಲಿ ಎಲ್ಲಿಯೂ ಸ್ಥಳವನ್ನು ಬಿಡದೆ ಮತ್ತು ಯಾವುದೇ ರೀತಿಯ ಸಂಕೇತಗಳನ್ನು ಬಳಸದೆ ನಮೂದಿಸಬೇಕು. ಅನಂತರ ಪ್ರವೇಶ ಪತ್ರವನ್ನು ಮಾಡಿಕೊಳ್ಳಬೇಕು.
ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಆನ್ ಲೈನ್ ಅರ್ಜಿ ಪ್ರತಿಯನ್ನು ಮತ್ತು ಪ್ರವೇಶ ಪತ್ರವನ್ನು ದ್ವಿ ಪ್ರತಿಯಲ್ಲಿ ಕಡ್ಡಾಯವಾಗಿ ತರಬೇಕು. ಪರೀಕ್ಷೆ ಮುಕ್ತಾಯಗೊಂಡ ನಂತರ ಆನ್ ಲೈನ್ ಅರ್ಜಿಯ ಮತ್ತು ಪ್ರವೇಶ ಪತ್ರದ ಮೂಲ ಪ್ರತಿಗಳನ್ನು ಕೊಠಡಿ ನಿರೀಕ್ಷಕರಿಗೆ ಪ್ರತಿ ಜೊತೆಗೆ ಸಲ್ಲಿಸಬೇಕು. ಉಳಿದ ಒಂದ ನಕಲಿ ಪ್ರತಿಯನ್ನು ಫಲಿತಾಂಶ ಪ್ರಕಟವಾಗುವವರೆಗೆ ತಾವು ಜೊಪಾನವಾಗಿ ಕಾಯ್ದಿಟ್ಟಿಕೊಳ್ಳಬೇಕು.
ಒಂದು ವೇಳೆ ಅರ್ಜಿಯಲ್ಲಾಗಲಿ ಅಥವಾ ಪ್ರವೇಶ ಪತ್ರದಲ್ಲಾದಲಿ ಲೋಪ-ದೋಷಗಳು ಕಂಡು ಬಂದಲ್ಲಿ, ಚಿಕ್ಕೋಡಿ ತಾಲೂಕಿನ ಕೋಥಳಿಯ ಜವಾಹರ ನವೋದಯ ವಿದ್ಯಾಲಯ, ಜಿಲ್ಲೆ ಬೆಳಗಾವಿ ಪ್ರಾಚಾರ್ಯರನ್ನು ಅರ್ಜಿ ಸಲ್ಲಿಸುವಾಗ ಮುಖ್ಯೋಪಾಧ್ಯಾಯರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ, ಆನ್ ಲೈನ್ ಅರ್ಜಿ ಪ್ರತಿ ಮತ್ತು ಪ್ರವೇಶ ಪತ್ರದ ಪ್ರತಿ ದಾಖಲೆಗಳೊಂದಿಗೆ ಏಪ್ರಿಲ್ ೨೦ ರಿಂದ ಏಪ್ರಿಲ್ ೨೮ ರ ಒಳಗಾಗಿ ಸಂಪರ್ಕಿ ಸಬೇಕು. ಹೆಚ್ಚಿನ ಮಹಿತಿಗಾಗಿ hಣಣಠಿs://ತಿತಿತಿ.ಟಿvsಚಿಜmiss ioಟಿಛಿಟಚಿssix.iಟಿ ವೆಬ್ ಸೈಟ್, ಪ್ರಾಚಾರ್ಯರಾದ ಅರವಿಂದ ಟಿ. ದೂರ ವಾಣಿ ಸಂಖ್ಯೆ ೮೮೩೭೦೪೩೯೫೫, ಹಾಗೂ ಪಿ.ಜಿ.ಟಿ ಯಾದ ಪ್ರವೇಣಕುಮಾರ ೯೪೦೨೩೬೦೬೦೦ ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋಥಳಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಅರವಿಂದ ಟಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply