This is the title of the web page
This is the title of the web page

Please assign a menu to the primary menu location under menu

State

ಶ್ರೀ ದೇವರ ದಾಸಿಮಯ್ಯನವರ ಜಯಂತಿ


ಗದಗ ಮಾರ್ಚ ೨೪ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಆದ್ಯ ವಚನಕಾರ ನೇಕಾರ ಸಂತ ಶ್ರೀ ದೇವರ ದಾಸಿಮಯ್ಯನವರ ಜಯಂತಿ-೨೦೨೩ಯನ್ನು ಮಾರ್ಚ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಗದಗ-ಬೆಟಗೇರಿಯ ಟರ್ನಲ್ ಪೇಟ, ದೇವರ ದಾಸಿಮಯ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಘನ ಉಪಸ್ಥಿತಿ ವಹಿಸುವರು, ಕೃಷಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು, ಲೋಕೋಪಯೋಗಿ ಇಲಾಖೆ ಸಚಿವರಾದ ಸಿ. ಸಿ. ಪಾಟೀಲ ಉಪಸ್ಥಿತಿ ವಹಿಸುವರು, ಗದಗ ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ರೋಣ ಶಾಸಕರಾದ ಕಳಕಪ್ಪ.ಜಿ. ಬಂಡಿ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಶಾಸಕರುಗಳಾದ ಎಸ್ .ವಿ ಸಂಕನೂರ, ಪ್ರದೀಪ ಶೆಟ್ಟರ, ಸಲೀಂ ಅಹ್ಮದ್, ಶಿರಹಟ್ಟಿ ಶಾಸಕ ರಾಮಣ್ಣ ಎಸ್. ಲಮಾಣಿ, ಮಾರ್ಕೆಟಿಂಗ್ ಕಮ್ಯುನಿಕೇಶನ್ ಆ್ಯಂಡ್ ಅಡ್ವರ್ಟೆÊಸಿಂಗ ಲಿಮಿಟೆಡ್ ಅಧ್ಯಕ್ಷರಾದ ಎಂ. ಎಸ್. ಕರಿಗೌಡ್ರ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಉಷಾ ದಾಸರ, ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಪಿ. ಬಾಕಳೆ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸಿದ್ದಪ್ಪ ಚ. ಪಲ್ಲೇದ ಆಗಮಿಸುವರು.
ಕೆ.ಎಲ್.ಇ.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಅನಸೂಯಾ ದೇವಾಂಗಮಠ ಅವರು ಉಪನ್ಯಾಸ ನೀಡುವರು.
ವಿಶೇಷ ಆಹ್ವಾನಿತರಾಗಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯರಾದ ಶ್ರೀಮತಿ ಪೂರ್ಣಿಮಾ ರಾ.ಬರದ್ವಾಡ, ಶ್ರೀಮತಿ ಲಕ್ಷಿ÷್ಮÃ ಕಾಕಿ, ಶ್ರೀಮತಿ ಶಕುಂತಲಾ ಅಕ್ಕಿ, ಗದಗ- ಬೆಟಗೇರಿ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಮಲ್ಲಿಕಾರ್ಜುನ ಐಲಿ, ಗದಗ-ಬೆಟಗೇರಿ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಶರಥರಾಜ ಗಂ.ಕೊಳ್ಳಿ, ಗದಗ-ಬೆಟಗೇರಿ ದೇವಾಂಗ ದಾಸಿಮಯ್ಯ ಟ್ರಸ್ಟ್ನ ಅಧ್ಯಕ್ಷರಾದ ರಮೇಶ ವ್ಹಿ.ಹತ್ತಿಕಾಳ, ಬೆಟಗೇರಿ ದೇವಾಂಗ ದಾಸಿಮಯ್ಯನವರ ಪ್ರತಿಷ್ಠಾನ ಹಾಗೂ ಉತ್ಸವ ಸಮಿತಿ ಅಧ್ಯಕ್ಷರಾದ ಅನಿಲ ಗಡ್ಡಿ ಅವರು ಭಾಗವಹಿಸುವರು.
ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮದ್ ಮೊಹಸಿನ್, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ , ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ. ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಾಬಾಸಾಬ ನೇಮಗೌಡರವರು ತಮ್ಮೆಲ್ಲರಿಗೂ ಸ್ವಾಗತ ಕೋರುವರು.


Leave a Reply