ಯರಗಟ್ಟಿ : ಆಧ್ಯಾತ್ಮ ಮನುಷ್ಯನ ಜೀವನದ ದಿಕ್ಕು ಮತ್ತು ಬದುಕು ಬದಲಿಸುವಂತಹ ಶಕ್ತಿ ಹೊಂದಿದೆ ಎಂದು ಯರಗಟ್ಟಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಜಯಶ್ರೀ ಅಕ್ಕನವರು ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ರವಿವಾರ ನಡೆದ ಯರಗಟ್ಟಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ರಾಜಯೋಗ ೫ನೇ ದಿನದ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಇಂತಹ ಆಧ್ಯಾತ್ಮ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸಿದಾಗ ಮಾತ್ರ ಅಜ್ಞಾನದಿಂದ ಸುಜ್ಞಾನದತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ತೊರಗಲ್ಲಮಠದ ದೀಪಕ ಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡಿ ೮೪ ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜೀವರಾಶಿ ಶ್ರೇಷ್ಠವಾದದ್ದು ಎಂದರು.
ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಬಾಬುಗೌಡ ಅಣ್ಣಿಗೇರಿ, ಚಂದ್ರಪ್ಪ ಶಿವಪೂಜಿ, ಈರಣ್ಣ ಹುದ್ದಾರ, ಶಂಕರಗೌಡ ಪಾಟೀಲ, ಬಸಯ್ಯ ಮಠಪತಿ, ನಿಂಗರಾಜ ಹೋಳಿ, ಆರ್.ಎಸ್.ಕಲ್ಲನ್ನವರ, ಬಸವರಾಜ ಪೂಜೇರ, ಗೀತಾ ಹಂಜಿ, ಶಶಿಕಲಾ ಉಪ್ಪಿನ, ಬಸವರಾಜ ಅಂಗಡಿ ಮತ್ತಿತರರು ಇದ್ದರು.
Gadi Kannadiga > Local News > ಆಧ್ಯಾತ್ಮಕದಿಂದ ಮನುಷ್ಯನ ಆರೋಗ್ಯ ವೃದ್ದಿ : ಜಯಶ್ರೀ ಅಕ್ಕನವರು