ವಿಜಯಪುರ ಡಿ.೨೬ ): ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಹಾಗೂ ಜೆಸಿಬಿ ಇಂಡಿಯಾ ಇವರ ಸಹಯೋಗದಲ್ಲಿ ೧೮ ರಿಂದ ೪೫ ವರ್ಷ ವಯೋಮಾನದ ಯುವಕರಿಗೆ ೩೦ ದಿನಗಳ ಉಚಿತ ಜೆಸಿಬಿ ಆಪರೇಟರ್ ತರಬೇತಿ ಆಯೋಜಿಸಲಾಗಿದೆ.
ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಗಳನ್ನೊಳಗೊಂಡ ಸ್ವವಿವರವುಳ್ಳ ಅರ್ಜಿಯನ್ನು ದಿನಾಂಕ : ೩೧-೧೨-೨೦೨೨ರೊಳಗೆ ಅಂಚೆ ಮೂಲಕ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-೫೮೧೩೨೫ ವಿಳಾಸಕ್ಕೆ ಅಥವಾ ವ್ಯಾಟ್ಸಪ್ (ಮೊ:೮೦೫೦೭೪೧೭೪೪) ಸಲ್ಲಿಸಿ ನೊಂದಾಯಿಸಿಕೊಳ್ಳಬಹುದಾಗಿದೆ. ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:೦೮೨೮೪-೨೯೮೫೪೭, ೯೬೩೨೧೪೩೨೧೭, ೯೪೪೯೭೮೨೪೨೫ ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Gadi Kannadiga > State > ಜೆಸಿಬಿ ಆಪರೇಟರ್ ಉಚಿತ ತರಬೇತಿ